HomeNationalಪ್ರಧಾನಿ ಮೋದಿಗೆ ಮಾತೃ ವಿಯೋಗ: ಇಹಲೋಕ ತ್ಯಜಿಸಿದ ಶತಾಯುಷಿ ಹೀರಾಬೆನ್

ಪ್ರಧಾನಿ ಮೋದಿಗೆ ಮಾತೃ ವಿಯೋಗ: ಇಹಲೋಕ ತ್ಯಜಿಸಿದ ಶತಾಯುಷಿ ಹೀರಾಬೆನ್

ಅಹಮದಾಬಾದ್: ತೀವ್ರವಾಗಿ ಅಸ್ವಸ್ಥಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್​​ನ ಅಹಮದಾಬಾದ್​ನಲ್ಲಿ ಶುಕ್ರವಾರ ನಿಧನರಾದರು. ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು.

ಆರೋಗ್ಯದಲ್ಲಿ ಏರು ಪೇರಾಗಿದ್ದ ಹೀರಾಬೆನ್ ಅವರನ್ನು ಅಹಮದಾಬಾದ್ ನ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ತಾಯಿಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸರಣಿ ಟ್ವೀಟ್ ಮಾಡಿ ಮೋದಿಯವರು, “ನಮ್ಮ ತಾಯಿಯ ಜೀವನದ ಮೂರು ಹಂತ ಕಂಡಿದ್ದೇನೆ. ತಪಸ್ವೀ ಬದುಕು, ನಿಸ್ವಾರ್ಥತೆ ಪ್ರತೀಕ, ಮೌಲ್ಯಾಧಾರಿತ ಬದ್ಧತೆ ಎಂದು ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ. “ಅವರಿಗೆ 100 ವರ್ಷ ಪೂರ್ಣವಾದಾಗ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೆ. ಆಗ ಅವರು ನೀಡಿದ ಹಿತ ವಚನ ನೆನಪಾಗುತ್ತಿದೆ. ಯಾವಾಗಲೂ ಬುದ್ಧಿವಂತಿಕೆಯಿಂದ ಕೆಲಸಗಳನ್ನು ಮಾಡಿ, ಪರಿಶುದ್ಧತೆಯಿಂದ ಬದುಕಿರಿ ಎಂದು ಹೇಳಿದ್ದರು” ಎಂದು ಮೋದಿ ಸರಣಿ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments