
ಹೈದರಾಬಾದ್: ಪ್ರವಾದಿ ಕುರಿತು ಹೇಳಿಕೆ ನೀಡಿದರೆಂಬ ಕಾರಣಕ್ಕೆ ತೆಲಂಗಾಣ ರಾಜ್ಯದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಲು ಆದೇಶಿಸಿದೆ. ರಾಜ ಸಿಂಗ್ ಅವರ ಬಂಧನದ ಸಂದರ್ಭದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 ಅನ್ನು ಅನುಸರಿಸಿಲ್ಲ ಎಂದು ಗಮನಿಸಿದ ನ್ಯಾಯಾಲಯವು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಈ ಮಧ್ಯೆ ಅಚ್ಚರಿ ಎಂಬಂತೆ ಬಿಜೆಪಿ ಪಕ್ಷ ರಾಜ ಸಿಂಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಅವರನ್ನು ಏಕೆ ಉಚ್ಚಾಟಿಸಬಾರದು ಎಂಬುದಕ್ಕೆ ಪಕ್ಷವು 10 ದಿನಗಳಲ್ಲಿ ಉತ್ತರವನ್ನು ಕೇಳಿದೆ. ಈ ಹಿಂದೆ ನೂಪುರ್ ಶರ್ಮ ಅವರನ್ನೂ ಕೂಡ ಬಿಜೆಪಿ ಉಚ್ಚಾಟನೆ ಮಾಡಿ ಕೈಬಿಟ್ಟಿತ್ತು.
ಸೋಮವಾರ, ಬಿಜೆಪಿ ಶಾಸಕ ರಾಜ ಸಿಂಗ್ ಅವರು ಇತ್ತೀಚೆಗೆ ನಗರದಲ್ಲಿ ಪ್ರದರ್ಶನ ನೀಡಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರುಕಿ ಅವರನ್ನು ಟೀಕಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಸಿಂಗ್ ಅವರು ಅದರಲ್ಲಿ ಇಸ್ಲಾಂ ಧರ್ಮದ ವಿರುದ್ಧ ಸ್ಪಷ್ಟವಾಗಿ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಮುನವರ್ ಫಾರೂಕಿ ನಮ್ಮ ಧರ್ಮದ ಬಗ್ಗೆ ಕಾಮಿಡಿ ಮಾಡಬಹುದಾದರೆ ನಾನೂ ಮಾಡಬಹುದಲ್ಲವೇ. ಇದೂ ಕೂಡ ಮುನವರ್ ಫಾರೂಕಿ ತರಹದ ಕಾಮಿಡಿ ಎಂದು ತಿಳಿದುಕೊಳ್ಳಿ ಎಂದು ರಾಜ ಸಿಂಗ್ ಹೇಳಿದ್ದರು.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL