National

ಪಂಜಾಬ್ ಚುನಾವಣೆ ಎನ್‌ಡಿಎ ಸೀಟು ಹಂಚಿಕೆ ಅಂತಿಮ: 65 ಸ್ಥಾನಗಳಲ್ಲಿ ಬಿಜೆಪಿ ಹೋರಾಟ, ಅಮರಿಂದರ್ ನೇತೃತ್ವದ ಪಿಕೆಸಿಗೆ 37 ಸ್ಥಾನ

ಚಂಡೀಗಢ: ಬಿಜೆಪಿ ನೇತೃತ್ವದ ಎನ್‌ಡಿಎ ಸೋಮವಾರ ಪಂಜಾಬ್ ಚುನಾವಣೆಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಒಪ್ಪಂದ ಪ್ರಕಾರ ಬಿಜೆಪಿ 65 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ಅದರ ಮಿತ್ರಪಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ್ ಕಾಂಗ್ರೆಸ್ 37 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಸುಖದೇವ್ ಸಿಂಗ್ ದಿಂಡ್ಸಾ ಮತ್ತು ರಂಜಿತ್ ಸಿಂಗ್ ಬ್ರಹ್ಮಪುರ ನೇತೃತ್ವದ ಮತ್ತೊಂದು ಎನ್‌ಡಿಎ ಪಾಲುದಾರ ಎಸ್‌ಎಡಿ ಪಕ್ಷ 15 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆಯನ್ನು ಪ್ರಕಟಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ 65 ಸ್ಥಾನಗಳಲ್ಲಿ, ಅಮರಿಂದರ್ ಅವರ ಪಂಜಾಬ್ ಲೋಕ್ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮತ್ತು ಎಸ್‌ಎಡಿ-ಸಂಯುಕ್ತ್ 15 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು, ಪಂಜಾಬ್‌ಗೆ ವಿಶೇಷ ಗಮನ ನೀಡಬೇಕಾಗಿದೆ. ಈ ಚುನಾವಣೆಯು ಪಂಜಾಬ್ ರಾಜ್ಯದ ಸ್ಥಿರತೆ ಮತ್ತು ಸುರಕ್ಷತೆಗಾಗಿ. ಪಂಜಾಬ್ ಅನ್ನು ಮರಳಿ ಹಳಿಗೆ ತರುವುದು ನಮ್ಮ ಧ್ಯೇಯವಾಗಿದೆಎಂದು ನಡ್ಡಾ ಈ ಸಂದರ್ಭ ಹೇಳಿದರು.

2017ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಒಟ್ಟು 117 ಸ್ಥಾನಗಳಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು, ಆ ಮೂಲಕ ಹಿಂದಿನ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಗದ್ದುಗೆಗೆ ಏರಿತ್ತು. ಎಎಪಿ 20 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಪ್ರತಿಪಕ್ಷವಾಯಿತು.

Exit mobile version