HomeNationalಭಾರತಕ್ಕೆ ರಾಜತಾಂತ್ರಿಕ ಗೆಲುವು: ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆ ಅಧಿಕಾರಿಗಳ ಶಿಕ್ಷೆಗೆ ತಡೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆ ಅಧಿಕಾರಿಗಳ ಶಿಕ್ಷೆಗೆ ತಡೆ

ಕತಾರ್: ಕಳೆದ ವರ್ಷ ಆಗಸ್ಟ್‌ನಿಂದ ಕತಾರ್‌ನಲ್ಲಿ ಜೈಲಿನಲ್ಲಿರುವ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ತೀರ್ಪಿಗೆ ಆಘಾತ ವ್ಯಕತಪಡಿಸಿದ್ದ ಭಾರತ ಈ ಕುರಿತು ಕತಾರ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಅವರಿಗೆ ನೀಡಲಾಗಿದ್ದ ಮರಣದಂಡನೆಯನ್ನು ತಡೆಹಿಡಿಯಲಾಗಿದೆ.

ಈ ಎಲ್ಲಾ ಮಾಜಿ ಅಧಿಕಾರಿಗಳ ವಿರುದ್ಧದ ಗೂಢಚಾರಿಕೆ ಆರೋಪ ಹೊರಿಸಲಾಗಿದೆ. ಇವರೆಲ್ಲರೂ ಕತಾರ್‌ನ ಖಾಸಗಿ ಕಂಪನಿ ಅಲ್ ದಹ್ರಾ ಜೊತೆ ಕೆಲಸ ಮಾಡುತ್ತಿದ್ದರು. ಭಾರತೀಯ ನೌಕಾಪಡೆಯ 8 ಜನ ಮಾಜಿ ಅಧಿಕಾರಿಗಳಿಗೆ ಗೂಢಚಾರಿಕೆ ನಡೆಸಿದ ಪ್ರಕರಣವೊಂದರಲ್ಲಿ ಕತಾರ್‌ನ ನ್ಯಾಯಾಲಯ ಅಕ್ಟೋಬರ್‌ 26ರಂದು ಮರಣ ದಂಡನೆ ವಿಧಿಸಿತ್ತು. ಈ ತೀರ್ಪಿಗೆ ಆಘಾತ ವ್ಯಕ್ತಪಡಿಸಿದ್ದ ಭಾರತ, 8 ಜನ ಭಾರತೀಯರನ್ನು ಶಿಕ್ಷೆಯಿಂದ ಪಾರು ಮಾಡಲು ಕಾನೂನಿನಡಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿತ್ತು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments