
ಪ್ಯಾರಿಸ್: ರಷ್ಯಾ-ಉಕ್ರೇನ್ ನಡುವೆ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಫ್ರಾನ್ಸ್ ಹಾಗು ಜರ್ಮನಿ ದೇಶಗಳು ನಡೆಸಿದ ಸಂಧಾನ ತಕ್ಕಮಟ್ಟಿಗೆ ಯಶಸ್ವೀಯಾಗಿದ್ದು ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ.
ರಷ್ಯಾ ಉಕ್ರೇನ್ ನಡುವೆ ಯುದ್ಧದವರೆಗೆ ಪರಿಸ್ಥಿತಿ ವಿಷಮವಾಗಿತ್ತು. ನ್ಯಾಟೋ ದೇಶಗಳು ರಷ್ಯಾ ಏನಾದರೋ ಉಕ್ರೇನ್ ಮೇಲೆ ಧಾಳಿ ನಡೆಸಿದರೆ ಉಕ್ರೇನ್ ರಕ್ಷಣೆಗೆ ನಿಲ್ಲಲು ತಯಾರಾಗಿದ್ದವು. ಈ ಬೆಳವಣಿಗೆ ಮತ್ತೊಂದು ವಿಶ್ವ ಯುದ್ಧಕ್ಕೆ ತೆರೆದುಕೊಳ್ಳುವ ಆತಂಕವಿತ್ತು.
ಫ್ರಾನ್ಸ್ ಹಾಗು ಜರ್ಮನಿ ದೇಶಗಳು ನಡೆಸಿದ ಸುದೀರ್ಘ 8 ಗಂಟೆಗಳ ಮಾತುಕತೆಯ ಬಳಿಕ ರಷ್ಯಾ ಉಕ್ರೇನ್ ಮಧ್ಯೆ ಕದನವಿರಾಮ ಏರ್ಪಟ್ಟಿದೆ. ಎರಡು ವಾರಗಳ ನಂತರ ಬರ್ಲಿನ್‌ನಲ್ಲಿ ರಷ್ಯಾ ಉಕ್ರೇನ್ ಮತ್ತೊಂದು ಸಭೆ ನಡೆಸಲಿದೆ.












































