
ಕೈವ್: ಉಕ್ರೇನ್ ಮೇಲಿನ ರಷ್ಯಾ ಸೇನೆ ದಾಳಿ ತೀವ್ರಗೊಂಡಿದ್ದು ಎರಡು ದಿನದ ಹಿಂದೆ ರಷ್ಯಾ ಧಾಳಿಗೆ ಸಿಲುಕಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಎಂಬವರು ಮೃತಪಟ್ಟಿದ್ದರು. ಇದೀಗ ಬಂದ ವರದಿಯಂತೆ ಮತ್ತೊರ್ವ ಭಾರತೀಯ ಮೃತಪಟ್ಟಿದ್ದಾನೆ.
ಯುದ್ಧದ ಧಾಳಿಗೆ ಸಿಕ್ಕಿ ಪಂಜಾಬ್ ನ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ ಅಸು ನೀಗಿದ್ದಾರೆ. ರಷ್ಯಾ ದಾಳಿಯಿಂದಾಗಿ ಭಾರತೀಯ ವಿದ್ಯಾರ್ಥಿ ಚಂದನ್ ಜಿಂದಾಲ್ ಗೆ ಬ್ರೇನ್ ಸ್ಟ್ರೋಕ್ ಆಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಚಂದನ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಇದರ ಬೆನ್ನಲ್ಲೇ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಎಲ್ಲಾ ನಾಗರಿಕರರಿಗೆ ತಕ್ಷಣವೇ ಖಾರ್ಕಿವ್ ತೊರೆಯುವಂತೆ ಆದೇಶ ನೀಡಿದೆ.












































