HomeNationalಸಾನಿಯಾ ಮಿರ್ಜಾಗೆ ಕೈಕೊಟ್ಟ ಶೋಯೆಬ್ ಮಲಿಕ್: ಪಾಕ್ ನಟಿ ಸನಾ ಜಾವೆದ್ ಜತೆ 3ನೇ ವಿವಾಹವಾದ...

ಸಾನಿಯಾ ಮಿರ್ಜಾಗೆ ಕೈಕೊಟ್ಟ ಶೋಯೆಬ್ ಮಲಿಕ್: ಪಾಕ್ ನಟಿ ಸನಾ ಜಾವೆದ್ ಜತೆ 3ನೇ ವಿವಾಹವಾದ ಕ್ರಿಕೆಟಿಗ

ಬೆಂಗಳೂರು: ಭಾರತೀಯ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗು ಅವರ ಪತಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ತಮ್ಮ ವೈವಾಹಿಕ ಸಂಬಂಧವನ್ನು ಕೊನೆಗೊಳಿಸುತ್ತಿದ್ದಾರೆ ಎನ್ನುವ ಗುಮಾನಿ ಇದೀಗ ನಿಜವಾಗುತ್ತಿದೆ.

ಇಸ್ಲಾಮಾಬಾದ್: ಪಾಕ್ ಕ್ರಿಕೆಟಿಗ ತನ್ನ ಎರಡನೇ ಪತ್ನಿ ಭಾರತದ ಸಾನಿಯಾ ಮಿರ್ಜಾಗೆ ಕೈಕೊಟ್ಟಿದ್ದು ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಜನವರಿ 20 ರಂದು ಶನಿವಾರ ಅವರು ನಟಿಯನ್ನು ಮದುವೆ ಆಗಿರುವುದಾಗಿ ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾನಿಯಾ ಮಿರ್ಜಾರಿಂದ ದೂರವಾಗಿರುವುದನ್ನು ಅಧಿಕೃತಗೊಳಿಸಿದ್ದಾರೆ.

ಶೋಯೆಬ್ ಮಲಿಕ್ ಗೆ ಇದು ಮೂರನೇ ಮದುವೆ. ೨೦೦೨ ರಲ್ಲಿ ಆಯೇಷಾ ಸಿದ್ದಿಕಿ ಎಂಬಾಕೆಯನ್ನು ಮದುವೆಯಾಗಿದ್ದ ಶೋಯೆಬ್ ಬಳಿಕ ಆಕೆಗೆ ವಿಚ್ಛೇದನ ನೀಡಿ ೨೦೧೦ರಲ್ಲಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿದ್ದರು. ಭಾರತೀಯೆಯಾಗಿದ್ದು ಪಾಕಿಸ್ತಾನಿಯನ್ನು ಮದುವೆಯಾಗುತ್ತಿರುವ ಬಗ್ಗೆ ಭಾರತದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು. ಇಬ್ಬರೂ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು ಮತ್ತು 2018 ರಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೋವಿಡ್ ಸಾಂಕ್ರಾಮಿಕದ ಬಳಿಕ ಇವರಿಬ್ಬರ ಮಧ್ಯೆ ವಿರಸ ಸೃಷ್ಟಿಯಾಗಿತ್ತು. ಬಳಿಕ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

RELATED ARTICLES

ಪ್ರಮುಖ ಸುದ್ದಿಗಳು

Recent Comments