National

ನಾನು ಕ್ರಿಶ್ಚಿಯನ್, ನಾನು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವುದಿಲ್ಲ: ಶಾಲಾ ಮುಖ್ಯೋಪಾಧ್ಯಾಯಿನಿಯಿಂದ ನಕ್ರಾ

ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಹಾಗೂ ಧ್ವಜವಂದನೆ ಸಲ್ಲಿಸಲು ನಿರಾಕರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಮುಖ್ಯೋಪಾಧ್ಯಾಯಿನಿ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲು ನಿರಾಕರಿಸಿದ್ದು, ಅವರ ಕ್ರಿಶ್ಚಿಯನ್ ಧಾರ್ಮಿಕ ನಂಬಿಕೆಯ ಪ್ರಕಾರ ಧ್ವಜವಂದನೆಯನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದರು ಎಂಬುದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ವಿಷಯಡಾ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿದ್ದಾರೆ.

ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಆದ ತಮಿಳ್ಸೆಲ್ವಿ ಈ ವರ್ಷ ನಿವೃತ್ತರಾಗುತ್ತಿದ್ದು ಮಾಹಿತಿಯ ಪ್ರಕಾರ, ಅವರನ್ನು ಗೌರವಿಸಲು ಆಗಸ್ಟ್ 15 ರ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಧ್ವಜಾರೋಹಣಕ್ಕೆ ಆಕೆ ನಿರಾಕರಿಸಿದ್ದರಿಂದ ಸಹಾಯಕ ಮುಖ್ಯೋಪಾಧ್ಯಾಯರೇ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಹಿಂದೆಯೂ ತಮಿಳ್ಸೆಲ್ವಿ ಅವರು ರಾಷ್ಟ್ರಧ್ವಜ ಹಾರಿಸಲು ಮತ್ತು ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ. ತಮಿಳ್ಸೆಲ್ವಿ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ತಾನು ಕ್ರಿಶ್ಚಿಯನ್ ಧರ್ಮದವಳು ಎಂದು ವಾದಿಸಿದ್ದಾರೆ. ಅವರ ರಾಷ್ಟ್ರಧ್ವಜವನ್ನು ಹಾರಿಸದಿರುವುದಕ್ಕೆ ಅಥವಾ ಅದಕ್ಕೆ ನಮಸ್ಕರಿಸದಿದ್ದಕ್ಕಾಗಿ ಯಾವುದೇ ಅಗೌರವವಿಲ್ಲ. “ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ ಹೊರತು ಬೇರೆ ಯಾರಿಗೂ ಅಲ್ಲ, ನಾವು ಧ್ವಜವನ್ನು ಗೌರವಿಸುತ್ತೇವೆ ಆದರೆ ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ” ಎಂದು ಅವರು ವಾದಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version