HomeNationalಆರ್‌ಎಸ್‌ಎಸ್ ನಾಗಪುರ ಕಚೇರಿ ಸ್ಫೋಟಿಸುವುದಾಗಿ ಅಪರಿಚಿತ ಕರೆ: ಭದ್ರತೆ ಹೆಚ್ಚಳ

ಆರ್‌ಎಸ್‌ಎಸ್ ನಾಗಪುರ ಕಚೇರಿ ಸ್ಫೋಟಿಸುವುದಾಗಿ ಅಪರಿಚಿತ ಕರೆ: ಭದ್ರತೆ ಹೆಚ್ಚಳ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಪ್ರಧಾನ ಕಛೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿದ್ದು ಭದ್ರತೆ ಹೆಚ್ಚಿಸಲಾಗಿದೆ. ಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.

“ಇಂದು (ಶನಿವಾರ) ಮಧ್ಯಾಹ್ನ 1 ಗಂಟೆಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೋನ್ ಕರೆ ಬಂದಿದೆ. ಮಹಲ್ ಪ್ರದೇಶದಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ(ಬಿಡಿಡಿಎಸ್) ಹಾಗೂ ಶ್ವಾನ ದಳವನ್ನು ಕರೆಸಿ ಕಚೇರಿ ಆವರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ” ಎಂದು ವಲಯ-3 ಡಿಸಿಪಿ ಗೋರಖ್ ಭಮ್ರೆ ಅವರು ಹೇಳಿದ್ದಾರೆ.

ಕಚೇರಿ ಸುತ್ತ ಗಸ್ತು ಹೆಚ್ಚಿಸಲಾಗಿದ್ದು, ಬೆದರಿಕೆ ಕರೆ ಮಾಡಿದವನನ್ನು ಗುರುತಿಸಲು ಪೊಲೀಸರು ಫೋನ್ ಸಂಖ್ಯೆಯನ್ನು ಟ್ರ್ಯಾಕ್ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments