HomeNationalತಾಲಿಬಾನಿನಿಂದ ಬಂತು ಮೊದಲ ಫತ್ವಾ: ಶಾಲೆಯಲ್ಲಿ ಹುಡುಗಿಯರು ಹುಡುಗರ ಕ್ಲಾಸಿನಲ್ಲಿ ಕುಳಿತುಕೊಳ್ಳುವಂತಿಲ್ಲ

ತಾಲಿಬಾನಿನಿಂದ ಬಂತು ಮೊದಲ ಫತ್ವಾ: ಶಾಲೆಯಲ್ಲಿ ಹುಡುಗಿಯರು ಹುಡುಗರ ಕ್ಲಾಸಿನಲ್ಲಿ ಕುಳಿತುಕೊಳ್ಳುವಂತಿಲ್ಲ

ಕಾಬೂಲ್: ತಾಲಿಬಾನ್ ಅಫ್ಘಾನ್ ವಹಿಸಿಕೊಂಡ ಬಳಿಕ ಮೊದಲ ಫತ್ವಾ ಹೊರಡಿಸಿದ್ದು ಶಾಲಾ ಕಾಲೇಜುಗಳಲ್ಲಿ ಸಹಶಿಕ್ಷಣವನ್ನು ನಿರ್ಬಂಧಿಸಲಾಗಿದೆ. ಇನ್ನು ಮೇಲೆ ಹುಡುಗಿಯರು ಹುಡುಗರ ಕ್ಲಾಸಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಈ ಬಗ್ಗೆ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಫತ್ವಾ ಹೊರಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಹಶಿಕ್ಷಣ ಹಾಗು ಪ್ರತ್ಯೇಖ ಶಿಕ್ಷಣದ ಮಿಶ್ರ ವ್ಯವಸ್ಥೆ ಇದೆ. ದೇಶದಾದ್ಯಂತ ಹೆಚ್ಚಿನ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಸಹಶಿಕ್ಷಣ ಪದ್ಧತಿ ಇದ್ದರೆ, ಹೆಚ್ಚಿನ ಶಾಲೆಗಳಲ್ಲಿ ಪ್ರತ್ಯೇಕ ಶಿಕ್ಷಣ ಪದ್ಧತಿಯಿದೆ. ಸರ್ಕಾರೀ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು ಪ್ರತ್ಯೇಕ ಶಿಕ್ಷಣ ವ್ಯವಸ್ಥೆಗೆ ಅಡ್ಡಿಯಾಗುವುದಿಲ್ಲ. ಆದರೆ ಹೆಚ್ಚಿನ ಖಾಸಗಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು ಪ್ರತ್ಯೇಕವಾಗಿ ಹುಡುಗಿಯರಿಗೆ ತರಗತಿಗಳನ್ನು ನಡೆಸುವುದು ಆರ್ಥಿಕವಾಗಿ ಹೊರೆಯಾಗಲಿದೆ.

ಶಿಕ್ಷಣ ಸಂಸ್ಥೆಗಳೊಡನೆ ಹೆರಾತ್‌ನಲ್ಲಿ ನಡೆದ ಸಭೆಯಲ್ಲಿ ತಾಲಿಬಾನ್‌ಗಳನ್ನು ಪ್ರತಿನಿಧಿಸುತ್ತಿದ್ದ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಉನ್ನತ ಶಿಕ್ಷಣದ ಮುಖ್ಯಸ್ಥ ಮುಲ್ಲಾ ಫರೀದ್, ಸಮಾಜದಲ್ಲಿನ ಎಲ್ಲಾ ಅನಿಷ್ಟಗಳಿಗೆ ಮೂಲ ಕಾರಣವಾದ ಸಹಶಿಕ್ಷಣವನ್ನು ಕೊನೆಗೊಳಿಸಬೇಕು ಎಂದು ಹೇಳಿದ್ದಾರೆ. ಮಹಿಳಾ ಉಪನ್ಯಾಸಕರು ಅಥವಾ ಒಳ್ಳೆಯ ಗುಣ ಹಿನ್ನಲೆ ಹೊಂದಿರುವ ಹಿರಿಯ ಪುರುಷರು ವಿದ್ಯಾರ್ಥಿನಿಯರಿಗೆ ಕಲಿಸಲು ಅಡ್ಡಿ ಇಲ್ಲ ಎಂದು ಮುಲ್ಲಾ ಫರೀದ್ ತಿಳಿಸಿದ್ದಾರೆ.

ಈ ಫತ್ವಾ ಪರಿಣಾಮ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇರುವ ಖಾಸಗಿ ಸಂಸ್ಥೆಗಳು ಆರ್ಥಿಕ ಹೊರೆಯ ಕಾರಣ ನೀಡಿ ಕ್ರಮೇಣ ಹುಡುಗಿಯರಿಗೆ ಶಿಕ್ಷಣವನ್ನು ನಿಲ್ಲಿಸಿದರೂ ಆಶ್ಚರ್ಯವಿಲ್ಲ. ಹಾಗಾದಲ್ಲಿ ಅಫ್ಘಾನಿಸ್ತಾನದ ಬಹುಪಾಲು ಹುಡುಗಿಯರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments