National

‘ಕಾಶ್ಮೀರ ಬಿಡಿ-ಇಲ್ಲವೇ ಸಾವನ್ನು ಎದುರಿಸಿ’: ಜಮ್ಮುವಿನಲ್ಲಿ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಉಗ್ರ ಸಂಘಟನೆ ಬೆದರಿಕೆ

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹವಾಲ್ ಟ್ರಾನ್ಸಿಟ್ ವಸತಿಗೃಹದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ಇಸ್ಲಾಂ ಭಾನುವಾರ ಬೆದರಿಕೆ ಹಾಕಿದೆ.

“ಎಲ್ಲಾ ವಲಸಿಗರು ಮತ್ತು ಆರ್‌ಎಸ್‌ಎಸ್ ಏಜೆಂಟ್‌ಗಳು ಇಲ್ಲಿಂದ ಹೊರಡುತ್ತಾರೆ ಅಥವಾ ಸಾವನ್ನು ಎದುರಿಸುತ್ತಾರೆ. ಕಾಶ್ಮೀರಿ ಮುಸ್ಲಿಮರನ್ನು ಕೊಲ್ಲಲು ಕಾಶ್ಮೀದಲ್ಲಿ ಮತ್ತೊಂದು ಇಸ್ರೇಲ್ ಬಯಸುವ ಕಾಶ್ಮೀರಿ ಪಂಡಿತರಿಗೆ ಜಾಗವಿಲ್ಲ. ನಿಮ್ಮ ಭದ್ರತೆಯನ್ನು ದ್ವಿಗುಣಗೊಳಿಸಿ ಅಥವಾ ಮೂರು ಪಟ್ಟು ಹೆಚ್ಚಿಸಿ,.ಉದ್ದೇಶಿತ ಹತ್ಯೆಗೆ ಸಿದ್ಧರಾಗಿರಿ. ನೀವು ಸಾಯುತ್ತೀರಿ” ಎಂದು ಆ ಕಾಲೋನಿ ಅಸೋಸಿಯೇಷನ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಕಳೆದ ಗುರುವಾರ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪಟ್ಟಣದ ತಹಸಿಲ್ ಕಚೇರಿಯೊಳಗೆ ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದ ಕೆಲವೇ ದಿನಗಳಲ್ಲಿ ಇದು ಸಂಭವಿಸಿದೆ. ಅವರ ಸಾವಿನ ನಂತರ, ಕೇಂದ್ರಾಡಳಿತ ಪ್ರದೇಶದಾದ್ಯಂತ ಕಾಶ್ಮೀರಿ ಹಿಂದೂ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಮಧ್ಯೆ ಕಣಿವೆಯಲ್ಲಿ ಅಮಾಯಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾನುವಾರದಂದು ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ಗೆ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕರಿಗೆ ನೆರವು ನೀಡುವವರನ್ನು ಬಿಡುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ. ಎಲ್ಲಾ ಪಿಎಂ ಪ್ಯಾಕೇಜ್ ಉದ್ಯೋಗಿಗಳನ್ನು ಸುರಕ್ಷಿತ ಜಿಲ್ಲೆ ಮತ್ತು ತಹಸಿಲ್ ಪ್ರಧಾನ ಕಚೇರಿಗೆ ನಿಯೋಜಿಸಲಾಗುವುದು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲು ಎಲ್‌ಜಿ ಸೆಕ್ರೆಟರಿಯೇಟ್‌ನಲ್ಲಿ ವಿಶೇಷ ಸೆಲ್ ಅನ್ನು ರಚಿಸಲಾಗಿದೆ ಎಂದು ಅವರು ನಿಯೋಗಕ್ಕೆ ತಿಳಿಸಿದರು.

Exit mobile version