
ಕೈವ್: ಯುದ್ಧಭೂಮಿಯಿಂದ ಓಡಿಹೋಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸೋಮವಾರ ಉಕ್ರೇನ್‌ನ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, “ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ, ಇಲ್ಲಿನ ಪ್ರತಿಯೊಬ್ಬರೂ ಅಧ್ಯಕ್ಷರು ಎಂದು ನಾನು ಹೇಳಿದ್ದೆ. ಉಕ್ರೇನ್‌ಗೆ ನಾವೆಲ್ಲರೂ ಜವಾಬ್ದಾರರಾಗಿರಬೇಕು ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ಯೋಧರಾಗಿರಬೇಕು ಎಂಬ ಉದ್ದೇಶದಿಂದ ಹೇಳಿದ್ದೆ’ ಎಂದು ಅವರು ಹೇಳಿದ್ದಾರೆ.
ಬೆಲಾರಸ್ ಗಡಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆಗೆ ಕೆಲವೇ ಕ್ಷಣಗಳ ಮೊದಲು ಉಕ್ರೇನ್ ಅಧ್ಯಕ್ಷರಿಂದ ಈ ಹೇಳಿಕೆ ಹೊರಬಿದ್ದಿದೆ. ರಷ್ಯಾ ಆಕ್ರಮಣದಿಂದ 350 ಕ್ಕೂ ಹೆಚ್ಚು ಉಕ್ರೇನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ನಮ್ಮ ಪ್ರತಿಧಾಳಿಯಲ್ಲಿ 5,300 ರಷ್ಯಾ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನಿಯನ್ ಸರ್ಕಾರ ಹೇಳಿಕೊಂಡಿದೆ.












































