
ಮುಂಬೈ: ಬರುವ ವರ್ಷದ ಮಾರ್ಚ್ ತಿಂಗಳ ಬಳಿಕ ಮಹಾರಾಷ್ಟ್ರದ ಶಿವಸೇನಾ ನೇತೃತ್ವದ ಸರ್ಕಾರ ಉರುಳಿ ಬಿಜೆಪಿ ಸರಕಾರ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮಾರ್ಚ್ ತಿಂಗಳ ವೇಳೆಗೆ ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಬದಲಾವಣೆಗಳು ಕಾಣಲಿದ್ದು.
ಬಿಜೆಪಿಯ ರಾಜ್ಯ ಪ್ರಮುಖರಾದ ಫಡ್ನವಿಸ್, ಚಂದ್ರಕಾಂತ್ ಪಾಟೀಲ್ ಹಾಗು ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್, ಪ್ರಫುಲ್ ಪಟೇಲ್ ದೆಹಲಿಗೆ ಭೇಟಿ ನೀಡಿದ ದಿನವೇ ಕೇಂದ್ರ ಸಚಿವ ನಾರಾಯಣ ರಾಣೆ ಸರಕಾರ ಬದಲಾವಣೆಯ ಹೇಳಿಕೆ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಶಿವಸೇನಾ ಸರಕಾರದ ಭಾಗವಾಗಿರುವ ಎನ್.ಸಿ.ಪಿ ಅಸಮಾಧಾನಗೊಂಡಿದೆ ಎಂದು ಹೇಳಲಾಗಿದ್ದು ಸರಕಾರ ಬದಲಾವಣೆ ಸಂದರ್ಭ ಬಂದರೆ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನಾರೋಗ್ಯದ ಕಾರಣ ಮುಂದಿನ ದಿನಗಳಲ್ಲಿ ಸರಕಾರ ಉರುಳಲಿದೆ. ಮುಂದೆ ಬಿಜೆಪಿ ಸರಕಾರ ಬರುವುದು ನಿಶ್ಚಿತ ಎಂದು ರಾಣೆ ತಿಳಿಸಿದರು.