HomePoliticalಪಂಜಾಬ್ ಬದಲಾವಣೆ ಪರ್ವ: ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ಹಾಗು ಅಕಾಲಿ ದಳ ಸಚಿವರು, ಶಾಸಕರು

ಪಂಜಾಬ್ ಬದಲಾವಣೆ ಪರ್ವ: ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ಹಾಗು ಅಕಾಲಿ ದಳ ಸಚಿವರು, ಶಾಸಕರು

ಚಂಡೀಗಢ: ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು ನಾಲ್ವರು ಮಾಜಿ ಸಚಿವರು ಇಂದು (ಶನಿವಾರ) ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಮೂಲಕ ತನ್ನ ಗಟ್ಟಿಯಾದ ಅಸ್ತಿತ್ವ ಇಲ್ಲದ ರಾಜ್ಯದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಹೆಚ್ಚಿಸಿಕೊಂಡಂತಾಗಿದೆ.

ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಕೇಂದ್ರ ಸಂಪುಟ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಾದ ರಾಜ್ ಕುಮಾರ್ ವೆರ್ಕಾ, ಬಲ್ಬೀರ್ ಸಿಂಗ್ ಸಿಧು, ಗುರುಪ್ರೀತ್ ಸಿಂಗ್ ಕಂಗರ್ ಮತ್ತು ಸುಂದರ್ ಶಾಮ್ ಅರೋರಾ ಅವರನ್ನು ಬಿಜೆಪಿಗೆ ಸ್ವಾಗತಿಸಲಾಯಿತು.

ಶಾಮ್ ಚೌರಾಸಿ ವಿಧಾನಸಭಾ ಕ್ಷೇತ್ರದ ಅಕಾಲಿ ದಳ ನಾಯಕಿ ಮೊಹಿಂದರ್ ಕೌರ್ ಜೋಶ್ ಮತ್ತು ಮಾಜಿ ಕಾಂಗ್ರೆಸ್ ಸಚಿವ ಬಲ್ಬೀರ್ ಸಿಂಗ್ ಸಿಧು ಅವರ ಸಹೋದರ ಮತ್ತು ಮೊಹಾಲಿ ಮೇಯರ್ ಅಮರ್‌ಜಿತ್ ಸಿಂಗ್ ಸಿಧು ಕೂಡ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments