
ಜಮ್ಮು ಮತ್ತು ಕಾಶ್ಮೀರ: ಮಹತ್ತರ ರಾಜಕೀಯ ಬೆಳವಣಿಗೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಸೋದರಳಿಯ ಮುಬಾಶಿರ್ ಆಜಾದ್ ಅವರು ಇಂದು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾಗಿ ಪಕ್ಷ ಸೇರುತ್ತಿದ್ದೇನೆ ಎಂದು ಮುಬಷಿರ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರ ಕಿರಿಯ ಸಹೋದರ ಲಿಯಾಕತ್ ಅಲಿ ಅವರ ಮಗನಾಗಿರುವ ಮುಬಾಶಿರ್ ಆಜಾದ್, ತಮ್ಮ ಚಿಕ್ಕಪ್ಪನಿಗೆ ಕಾಂಗ್ರೆಸ್ ನಾಯಕತ್ವದಿಂದ ಆದ ಅಗೌರವದಿಂದ ತನಗೆ ನೋವುಂಟಾಗಿದೆ. ಇದುವೇ ಕಾಂಗ್ರೆಸ್ ಪಕ್ಷದಿಂದ ಬೇರ್ಪಡಲು ಕಾರಣವಾಯಿತು. ಆದರೆ, ಬಿಜೆಪಿ ಸೇರುವ ಬಗ್ಗೆ ಚಿಕ್ಕಪ್ಪನ ಜತೆ ಚರ್ಚಿಸಿಲ್ಲ ಎಂದು ಹೇಳಿದರು.
ಮುಬಾಶಿರ್ ಆಜಾದ್ ಮತ್ತು ಅವರ ಬೆಂಬಲಿಗರನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು.












































