Political

ಮಹಾ ರಾಜಕೀಯ ರೋಚಕ ಟ್ವಿಸ್ಟ್: ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಪಟ್ಟ ಕೊಟ್ಟ ಬಿಜೆಪಿ

ಮುಂಬೈ: ಮಹಾರಾಷ್ಟ್ರ ರಾಜಕೀಯಕ್ಕೆ ಕ್ಷಣದಲ್ಲಿ ರೋಚಕ ತಿರುವು ಸಿಕ್ಕಿದ್ದು ಸ್ವತಃ ಬಿಜೆಪಿ ಶಿವಸೇನೆ ಬಂಡಾಯಗಾರ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಫರ್ ನೀಡಿದೆ. ಈ ಕ್ಷಣದವರೆಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿ ಎಂದು ನಂಬಲಾಗಿತ್ತು. ಆದರೆ ಇಂದು ಸ್ವತಃ ಫಡ್ನವಿಸ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಶಿಂಧೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.

“ನಾನು ಸರ್ಕಾರದಿಂದ ಹೊರಗುಳಿಯುತ್ತೇನೆ ಮತ್ತು ಅದು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುತ್ತೇನೆ. ಏಕನಾಥ್ ಶಿಂಧೆ ಅವರು ಸಂಜೆ 7:30 ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬೇರೆ ಯಾವುದೇ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದರು.

ಆದರೆ ಈ ಹಿಂದೆ ಶಿವಸೇನೆ ಮುಖ್ಯಮಂತ್ರಿ ಸ್ಥಾನ ಕೇಳಿದಾಗ ಬಿಜೆಪಿ ಅದಕ್ಕೆ ವಿರೋಧವ್ಯಕ್ತಪಡಿಸಿತ್ತು. ಪ್ರತಿ ಸಲ ಬಿಜೆಪಿಯವರೇ ಮುಖ್ಯಮಂತ್ರಿ ಆಗುತ್ತಿದ್ದಾರೆ ಈ ಬಾರಿ ಒಂದು ಅವಕಾಶ ಶಿವಸೇನೆಗೆ ಕೊಡಿ ಎಂದು ಉದ್ಧವ್ ವಿಧಾನಸಭಾ ಚುನಾವಣೆಯ ಬಳಿಕ ಕೇಳಿದ್ದರು. ಉದ್ದವ್ ಠಾಕ್ರೆ ಅಂದು ಎಷ್ಟೇ ಮನವಿ ಮಾಡಿದರೂ ಬಿಜೆಪಿ ಬಗ್ಗಿರಲಿಲ್ಲ. ಆಗ ಶಿವಸೇನೆ ಕಾಂಗ್ರೆಸ್ ಹಾಗು ಶರದ್ ಮೈತ್ರಿ ಮಾಡಿ ಅಧಿಕಾರಕ್ಕೆ ಏರಿತ್ತು. ಇದೀಗ ಸ್ವತಃ ಬಿಜೆಪಿ ಶಿವಸೇನೆಯ ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಪಟ್ಟ ಕೊಟ್ಟಿದೆ. ಆ ಕೆಲಸವನ್ನು ಅಂದೇ ಮಾಡಿದ್ದರೆ ಇಷ್ಟೆಲ್ಲಾ ರಾದ್ಧಾಂತ ನಡೆಯುವ ಸಂಭವವೇ ಇರಲಿಲ್ಲ ಅನ್ನುವುದು ರಾಜಕೀಯ ಪರಿಣಿತರ ಅಭಿಪ್ರಾಯ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version