Political

ಎರಡನೇ ಬಾರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಮಾರ್ಚ್ 25ರಂದು ಯೋಗಿ ಪ್ರಮಾಣ ವಚನ

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಯೋಗಿ ಆದಿತ್ಯನಾಥ್ ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಇದೆ ಮಾರ್ಚ್ 25 ರಂದು ಪ್ರಮಾಣ ವಚನ ಸ್ವೀಕರಿಸುವ ಸಂಭವವಿದೆ.

ಉತ್ತರಪ್ರದೇಶದಲ್ಲಿ 35 ವರ್ಷಗಳ ಬಳಿಕ ಅಧಿಕಾರದಲ್ಲಿರುವ ಪಕ್ಷವೇ ಮರಳಿ ಗೆದ್ದು ಬಂದ ದಾಖಲೆ ಬರೆದಿರುವ ಬಿಜೆಪಿ ಈ ಬಾರಿ 255 ಸೀಟುಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಭಾರೀ ಪೈಪೋಟಿ ನೀಡಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ 111 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಆದರೆ ಬಿಜೆಪಿ 2017ರಲ್ಲಿ ಗಳಿಸಿದ ಸೀಟುಗಳಿಗಿಂತ 57 ಸೀಟುಗಳನ್ನು ಕಡಿಮೆ ಗಳಿಸಿಕೊಂಡಿದೆ. ಆದರೆ ಆಡಳಿತ ಪಕ್ಷವಾಗಿ ಮತ್ತೆ 255 ತನಕ ಸೀಟು ಗೆದ್ದಿದ್ದು ಸಾಧನೆಯೇ ಸರಿ.

ಒಂದು ಕಾಲದಲ್ಲಿ ರಾಜ್ಯವನ್ನು ಆಳಿದ್ದ ಮಾಯಾವತಿಯ ಬಹುಜನ ಸಮಾಜ ಪಕ್ಷ ಕೇವಲ ೧ ಸ್ಥಾನ ಗೆದ್ದು ಮುಖಭಂಗ ಅನುಭವಿಸಿದ್ದರೆ, ಪ್ರಿಯಾಂಕಾ ಗಾಂಧೀ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್ ಕೇವಲ ೨ ಸ್ಥಾನ ಗಳಿಸಲಷ್ಟೇ ಶಕ್ತವಾಗಿತ್ತು.

Exit mobile version