HomeSportsಪ್ಯಾರಾ ಒಲಿಂಪಿಕ್: ಬೆಳ್ಳಿ ಗೆದ್ದ ಭಾರತದ ಭವೀನಾ ಬೆನ್ ಪಟೇಲ್

ಪ್ಯಾರಾ ಒಲಿಂಪಿಕ್: ಬೆಳ್ಳಿ ಗೆದ್ದ ಭಾರತದ ಭವೀನಾ ಬೆನ್ ಪಟೇಲ್

ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಮೊದಲ ಪದಕವನ್ನು ಜಯಿಸಿದೆ. ಟೇಬಲ್ ಟೆನಿಸ್ ಪಂದ್ಯದಲ್ಲಿ ಭಾರತ ಭವೀನಾ ಬೆನ್ ಪಟೇಲ್ ಅವರು ಬೆಳ್ಳಿ ಜಯಿಸಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದಾರೆ.

ಟೇಬಲ್ ಟೆನಿಸ್ ಫೈನಲ್ ಪಂದ್ಯದಲ್ಲಿ ಪಟೇಲ್ ಅವರು ಚೀನಾದ ಜೊಯಿಂಗ್ ಅವರೆದುರು 11-7, 11-5, 11-6 ಅಂತರದಲ್ಲಿ ಸೋಲು ಕಂಡು ರಜತ ಪದಕಕ್ಕೆ ತೃಪ್ತಿ ಪಟ್ಟರು. ಇದು ಭಾರತಕ್ಕೆ ಐತಿಹಾಸಿಕವಾಗಿದ್ದು ಪ್ಯಾರಾ ಒಲಿಂಪಿಕ್ ಟೇಬಲ್ ಟೆನಿಸ್ ವಿಭಾಗದಲ್ಲಿ ಇದು ಮೊದಲ ಪದಕವಾಗಿದೆ.

ಚಿನ್ನದ ಪದಕದ ಪಂದ್ಯಕ್ಕೂ ಮೊದಲು ಪ್ರಧಾನಿ ಮೋದಿ ಸೇರಿ ಹಲವರು ಪಟೇಲ್ ಅವರಿಗೆ ಶಿಭ ಹಾರೈಸಿದ್ದರು. ಬೆಳ್ಳಿ ಪದಕ ತಂದುಕೊಟ್ಟ ಭವೀನಾ ಬೆನ್ ಪಟೇಲ್ ಅವರ ಸಾಧನೆಗೆ ದೇಶದಾದ್ಯಂತ ಪ್ರಶಂಶೆಗಳ ಸುರಿಮಳೆ ಹರಿದಿದೆ.

ಭಾವಿನ ಪಟೇಲ್ ಅವರ ಹುಟ್ಟೂರಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು ಪಟಾಕಿ ಹಚ್ಚಿ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ. ‘ಭವಿನಾಳ ಸಾಧನೆ ನಮ್ಮನ್ನು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದೆ. ಭವಿನಾಳ ಸ್ವಾಗತಕ್ಕೆ ಅದ್ಧೂರಿ ತಯಾರಿ ನಡೆಸುತ್ತೇವೆ’ ಎಂದು ಭವಿನ ಬೆನ್ ಪಟೇಲ್ ಅವರ ಅವರ ತಂದೆ ಹಸ್ಮುಖ್ ಭಾಯ್ ಪಟೇಲ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments