Sports

ಕಾಮನ್ವೆಲ್ತ್ ಗೇಮ್ಸ್ 2022: ಮತ್ತೊಂದು ಚಿನ್ನ ಗೆದ್ದ ಜೆರೆಮಿ, ಭಾರತದ ಪದಕ ಪಟ್ಟಿ 5ಕ್ಕೆ ಏರಿಕೆ

ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದ್ದು ವೆಯ್ಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕ ಗಳಿಕೆಯನ್ನು 5ಕ್ಕೆ ಏರಿಸಿದ್ದಾರೆ.

67ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 19 ವರ್ಷದ ಭಾರತೀಯೇ ಜೆರೆಮಿ ಲಾಲ್ರಿನ್ನುಂಗಾ 300 ಕೆಜಿ ಭಾರತ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 300 ಕೆಜಿ ತೂಕ ಎತ್ತುವ ಮೂಲಕ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸಂಕೇತ್ ಸರ್ಗಾರ್ ಬೆಳ್ಳಿ ಪದಕ, ಗುರುರಾಜ ಪೂಜಾರಿ ಕಂಚಿನ ಪದಕ, ಮೀರಾಬಾಯಿ ಚಾನು ಚಿನ್ನದ ಪದಕ, ಬಿಂದ್ಯಾರಾಣಿ ಬೆಳ್ಳಿ ಪದಕ, ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದಿದ್ದಾರೆ.

Exit mobile version