HomeSportsಭಾರತ ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ರದ್ದು: ಭಾರತದ ನಿರ್ಧಾರಕ್ಕೆ ಪರ ವಿರೋಧ ಅಭಿಪ್ರಾಯ

ಭಾರತ ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ರದ್ದು: ಭಾರತದ ನಿರ್ಧಾರಕ್ಕೆ ಪರ ವಿರೋಧ ಅಭಿಪ್ರಾಯ

ಮ್ಯಾಂಚೆಸ್ಟರ್: ಭಾರತ ಹಾಗು ಇಂಗ್ಲೆಂಡ್ ತನದಗಳ ನಡುವಿನ ಐದನೇ ಹಾಗು ಅಂತಿಮ ಟೆಸ್ಟ್ ಪಂದ್ಯವನ್ನು ಕೋವಿಡ್ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ. ಭಾರತೀಯ ತಂಡದಲ್ಲಿ ಹಲವು ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಭಾರತ ತಂಡ ಪಂದ್ಯವನ್ನು ರದ್ದುಗೊಳಿಸಲು ಕೇಳಿಕೊಂಡಿತ್ತು.

ಇದೀಗ ಭಾರತದ ನಿರ್ಧಾರಕ್ಕೆ ಇಂಗ್ಲೆಂಡ್ ನಲ್ಲಿ ಟೀಕೆ ವ್ಯಕ್ತವಾಗಿದ್ದರೆ, ಇತರೆಡೆ ಬೆಂಬಲ ವ್ಯಕ್ತವಾಗಿದೆ. ಕೋವಿಡ್ ಕಾರಣ ನೀಡಿ ಕ್ರಿಕೆಟ್ ಗೌರವವನ್ನು ಕಡಿಮೆ ಮಾಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ. ಹೆಚ್ಚಿನವರು ಭಾರತ ತಂಡದಲ್ಲಿ ಕೋವಿಡ್ ಕಾಣಿಸಿಕೊಂಡಿರೋದ್ರಿಂದ ಭಾರತದ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ 2020ರಲ್ಲಿ ಇಂಗ್ಲೆಂಡ್ ತಂಡ ಸೌತ್ ಆಫ್ರಿಕಾ ಪ್ರವಾಸವನ್ನು ಕೋವಿಡ್ ಕಾರಣಕ್ಕೆ ರದ್ದು ಪಡಿಸಿತ್ತು. ಆದರೆ ಆಗ ಇಂಗ್ಲೆಂಡ್ ತಂಡದಲ್ಲಿ ಯಾರಿಗೂ ಕೋವಿಡ್ ಬಂದಿರಲಿಲ್ಲ. ಆದರೂ ಇಂಗ್ಲೆಂಡ್ ತಂಡ ಸರಣಿಯನ್ನು ರದ್ದುಗೊಳಿಸಿತ್ತು. ಇದು ಈಗ ಟೀಕೆಗೆ ಗುರಿಯಾಗಿದೆ. ಭಾರತ ತಂಡದಲ್ಲಿ ನಿಜವಾಗಲೂ ಹಲವು ಮಂದಿ ಕೋವಿಡ್ ಪಾಸಿಟಿವ್ ಹೊಂದಿದ್ದಾರೆ. ಹಾಗಾಗಿ ಭಾರತ ತಂಡದ ನಿರ್ಧಾರ ನ್ಯಾಯಯುತವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯ ಕಡಿಮೆ ಬೆಳಕಿನ ಕಾರಣ ಬೇಗನೆ ನಿಲ್ಲಿಸಲಾಗಿತ್ತು. ಆ ಪಂದ್ಯವನ್ನು ಭಾರತ ಗೆಲ್ಲುವ ಸನಿಹದಲ್ಲಿತ್ತು. ಕಡಿಮೆ ಬೆಳಕಿನ ಸಮಸ್ಯೆ ಇಲ್ಲದಿದ್ದಿದ್ದರೆ ಭಾರತದ ಮುನ್ನಡೆ 3-1 ಆಗಿರುತ್ತಿತ್ತು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments