
ಹೈದರಾಬಾದ್: ಪ್ರವಾಸೀ ನ್ಯೂಜಿಲ್ಯಾಂಡ್ ತಂಡದೆದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಪೇರಿಸಿಯೂ ಹೋರಾಟದ ಮೂಲಕ ವೀರೋಚಿತ ಜಯ ದಾಖಲಿಸಿದೆ. ಮೊದಲ ಏಕದಿನವನ್ನು 12 ರನ್ನುಗಳಿಂದ ಜಯಿಸಿದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮ ಹಾಗು ಶುಭ್ ಮನ್ ಗಿಲ್ ಮೊದಲ ವಿಕೇಟಿಗೆ 60 ರನ್ ಜತೆಯಾಟ ನೀಡಿದರು. ನಂತರ ಬಂದ ಆಟಗಾರರರು ಉತ್ತಮ ಆಟ ನೀಡುವಲ್ಲಿ ವಿಫಲರಾದರೂ ಮತ್ತೊಂದು ಬದಿಯಲ್ಲಿ ನಿಂತ ಶುಭ್ ಮನ್ ಗಿಲ್ ಅಮೋಘವಾಗಿ ಆಡಿ ದ್ವಿಶತಕ ದಾಖಲಿಸಿ ಮಿಂಚಿದರು. ಇವರಿಗೆ ಮಾಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಹಾಗು ಹಾರ್ದಿಕ್ ಪಂದ್ಯ ಸ್ವಲ್ಪ ಮಟ್ಟಿನ ಸಾಥ್ ನೀಡಿದರು. ಉಳಿದಂತೆ ಗಿಲ್ ಅವರದು ಏಕಾಂಗಿ ಹೋರಾಟ. 149 ಬಾಲ್ ಎದುರಿಸಿದ ಗಿಲ್ 208 ರನ್ ದಾಖಲಿಸಿ ಕೊನೆಯ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ 349 ರನ್ ಗಾಲ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ಆರಂಭಿಕ ಆಘಾತಕ್ಕೆ ಸಿಲುಕಿ 131ಕ್ಕೆ 6 ವಿಕೆಟ್ ಕಳೆದು ಸೋಲುವ ಭೀತಿಗೆ ಬಂದು ನಿಂತಿತ್ತು. ಏಳನೇ ಕ್ರಮಾಂಕದಲ್ಲಿ ಆಡಲು ಬಂದ ಮೈಕಲ್ ಬ್ರೇಸ್ ವೆಲ್ ಭಾರತದ ಊಹೆಗೂ ನಿಲುಕದಂತೆ ಬಂಡೆಯಂತೆ ನಿಂತು ಹೊಡೆಬಡಿಯ ಆಟದ ಮೂಲಕ ಗೆಲುವಿನ ಹತ್ತಿರಕ್ಕೆ ತಂಡವನ್ನು ತಂದು ನಿಲ್ಲಿಸಿದರು. ಬ್ರೇಸ್ ವೆಲ್ ಗಳಿಕೆ 78 ಬಾಲುಗಳಲ್ಲಿ 140 ರನ್. ಇವರಿಗೆ ಉತ್ತಮ ಸಾಥ್ ನೀಡಿದ ಸ್ಯಾಂಟ್-ನರ್ ಅಮೋಘ ಅರ್ಧ ಶತಕ ಬಾರಿಸಿದರು. ಕೊನೆಯ ಓವರ್ ತನಕ ಬ್ಯಾಟಿಂಗ್ ಕಾಯ್ದುಕೊಂಡ ಬ್ರೇಸ್ ವೆಲ್ ಎಲ್ಬಿಡಬ್ಲ್ಯೂ ಬಲೆಗೆ ಬೀಳುವುದರೊಂದಿಗೆ ಕೀವಿಸ್ ಹೋರಾಟ ಅಂತ್ಯ ಕಂಡಿತು. ಈ ಮೂಲಕ ಭಾರತ ರೋಚಕ 17 ರನ್ನುಗಳ ಜಯ ದಾಖಲಿಸಿತು.












































