HomeSportsಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ: 3ನೇ ಪಂದ್ಯ ಗೆದ್ದ ಭಾರತ, ಸರಣಿ ಆಸೆ ಜೀವಂತ

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ: 3ನೇ ಪಂದ್ಯ ಗೆದ್ದ ಭಾರತ, ಸರಣಿ ಆಸೆ ಜೀವಂತ

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಸತತ 2 ಸೋಲು ಕಂಡಿದ್ದ ಕಂಗೆಟ್ಟಿದ್ದ ಟೀಂ ಇಂಡಿಯಾ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಗೆಲುವಿನ ಟ್ರಾಕ್ ಗೆ ಮರಳಿ ಸರಣಿ ಜಯದ ಆಸೆಯನ್ನು ಜೀವಂತವಾಗಿರಿಸಿದೆ.

ಇಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ೨೦ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿತು. ಒಂದು ಹಂತದಲ್ಲಿ ೨೦೦ ರನ್ ಗಡಿ ದಾಟುವ ಸೂಚನೆ ನೀಡಿದ್ದ ಭಾರತಕ್ಕೆ ಆರಂಭಿಕ ಬ್ಯಾಟ್ಸ್ಮ್ಯಾನ್’ಗಳನ್ನು ಹೊರತು ಪಡಿಸಿ ಉಳಿದವರು ಸಾಥ್ ನೀಡದೆ ರನ್ ಹರಿವು ಕುಗ್ಗುವಂತಾಯಿತು. ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಚೊಚ್ಚಲ ಅರ್ಧ ಶತಕ (57) ಸಿಡಿಸಿದರೆ ಮತ್ತೊಮ್ಮ ಆರಂಭಿಕ ಆಟಗಾರ ಇಶಾನ್ ಕಿಶನ್ ತಮ್ಮ ದ್ವೀತಿಯ ಅರ್ಧ ಶತಕ (54) ದಾಖಲಿಸಿ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. ಉಳಿದಂತೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಜೇಯ 31 ರನ್ ಬಾರಿಸಿ ತಂಡದ ಮೊತ್ತ 179ಕ್ಕೆ ಏರುವಲ್ಲಿ ನೆರವಾದರು.

180 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 131 ರನ್ ಗಳಿಗೆ ಆಲೌಟ್ ಆಗಿದ್ದು 48 ರನ್ ಗಳಿಂದ ಸೋಲು ಕಂಡಿದೆ.ದಕ್ಷಿಣ ಆಫ್ರಿಕಾ ಪರ ತೆಂಬಾ ಬವುಮಾ 8, ರೀಜಾ ಹೆಂಡ್ರಿಕ್ಸ್ 23, ಡ್ವೈನ್ ಪ್ರಿಟೋರಿಯಸ್ 20, ಹೆನ್ರಿಚ್ ಕ್ಲಾಸೆನ್ 29, ಪರ್ಲೆನ್ ಅಜೇಯ 22 ರನ್ ಗಳಿಸಿದರು.

ಭಾರತದ ಪರ ಹರ್ಷಲ್ ಪಟೇಲ್ 4, ಯಜುವೇಂದ್ರ ಚಹಾಲ್ 3, ಭುವನೇಶ್ವರ್ ಕುಮಾರ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಕಿತ್ತು ಮಿಂಚಿದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments