Sports

ಐಪಿಎಲ್ 2022: ಹೈದರಾಬಾದ್ ಅನ್ನು ಕಟ್ಟಿಹಾಕಿದ ಲಖನೌ ಸೂಪರ್ಗೈಂಟ್ಸ್

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್ 2022ರ ಸೋಮವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ಗೈಂಟ್ಸ್ 12 ರನ್ ಗಳಿಂದ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ಗೈಂಟ್ಸ್ ನಿಗದಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿತ್ತು. 170 ರನ್ ಗಳ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಪೂರ್ತಿ 20 ಓವರ್ ಆಡಿ 9 ವಿಕೆಟ್ ನಷ್ಟಕ್ಕೆ 157 ಪೇರಿಸಲಷ್ಟೆ ಶಕ್ತವಾಯಿತು. ಆವೇಶ್ ಖಾನ್ 4 ವಿಕೆಟ್ ಕಬಳಿಸಿ ಹೈದರಾಬಾದ್ ಅನ್ನು ಕಟ್ಟಿ ಹಾಕುವಲ್ಲಿ ಯಶಸ್ವೀಯಾದರು.

ಲಖನೌ ಪರ ನಾಯಕ ಕೆಎಲ್ ರಾಹುಲ್ 68, ಮನೀಶ್ ಪಾಂಡೆ 11, ದೀಪಕ್ ಹೂಡಾ 51, ಅಯೂಶ್ ಬದೋನಿ 19 ರನ್ ಗಳಿಸಿದರು.

ಹೈದರಾಬಾದ್ ಪರ ಅಭಿಶೇಕ್ ಶರ್ಮಾ 13, ಕೇನ್ ವಿಲಿಯಮ್ಸನ್ 16, ರಾಹುಲ್ ತ್ರಿಪಾಠಿ 44, ನಿಕೋಲಸ್ ಪೂರನ್ 34 ಮತ್ತು ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿದರು.

Exit mobile version