Sports

ಐಪಿಎಲ್ 2024ಗೆ ಇನ್ನೊಂದು ತಿಂಗಳು ಬಾಕಿ: ಮಾ. 22ಕ್ಕೆ ಚೆನ್ನೈನಲ್ಲಿ ಚೆನ್ನೈ-RCB ನಡುವೆ ಉದ್ಘಾಟನಾ ಪಂದ್ಯ!

ಚೆನ್ನೈ: 2024ರ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಭಾರ್ತಿ ಒಂದು ತಿಂಗಳು ಇದೆ. ಟೂರ್ನಿಯ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದ್ದು, ಮಾರ್ಚ್ 22 ರಂದು ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಉದ್ಘಾಟನಾ ಪಂದ್ಯ ನಡೆಯಲಿದೆ.

ಈ ಬಾರಿಯ ಐಪಿಎಲ್ ನ ಮೊದಲ 17 ದಿನಗಳ ವೇಳಾಪಟ್ಟಿ:

ಈ ವರ್ಷ ಲೋಕಸಭಾ ಚುನಾವಣೆ ಕೂಡ ಇರುವುದರಿಂದ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಟೂರ್ನಿಯ ಮೊದಲ 17 ದಿನಗಳಲ್ಲಿ 21 ಪಂದ್ಯಗಳು ನಡೆಯಲಿವೆ. ಮಾರ್ಚ್ 23 ರಂದು ಮೊಹಾಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

Exit mobile version