
ಇಸ್ತಾಂಬುಲ್: ಗುರುವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಫ್ಲೈ-ವೇಟ್ ಫೈನಲ್‌ನಲ್ಲಿ ಭಾರತದ ನಿಖತ್ ಜರೀನ್ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೂಲಕ ನಿಖತ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಆಗಿದ್ದಾರೆ. 25 ವರ್ಷದ ಜರೀನ್ ಈ ಹಿಂದೆ ಜೂನಿಯರ್ ಯೂತ್ ವಿಶ್ವ ಚಾಂಪಿಯನ್ ಆಗಿದ್ದರು. ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್‌ನಲ್ಲಿ ಥಾಯ್ಲೆಂಡ್ ಎದುರಾಳಿ ವಿರುದ್ಧ ನಿಖತ್ ಅಮೋಘ ಹೋರಾಟ ನಡೆಸಿ 30-27, 29-28, 29-28, 30-27, 29-28 ಅಂಕಗಳಿಂದ ಜಯಿಸಿ ಚಿನ್ನದ ಪದಕ ತಂದುಕೊಟ್ಟರು.
ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಮೇರಿ ಕೋಮ್ ಆರು ಬಾರಿ ಚಾಂಪಿಯನ್ ಆಗಿದ್ದರು(2002, 2005, 2006, 2008, 2010 ಮತ್ತು 2018). ಉಳಿದ ನಾಲ್ವರು ಭಾರತೀಯರೆಂದರೆ ಸರಿತಾ ದೇವಿ (2006), ಜೆನ್ನಿ (2006) ಮತ್ತು ಲೇಖ ಕೆಸಿ (2006).