HomeNationalಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್: ಪ್ರಧಾನಿ ಮೋದಿ ಜತೆ ಚರ್ಚೆ

ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್: ಪ್ರಧಾನಿ ಮೋದಿ ಜತೆ ಚರ್ಚೆ

ನವದೆಹಲಿ: ಭಾರತದ ಆಪ್ತಮಿತ್ರ ರಷ್ಯಾ ಅಧ್ಯಕ್ಷ ವಾದಿಮೀರ್ ಪುಟಿನ್ ಇದೆ ಡಿಸೆಂಬರ್ 6ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಜತೆ ಶೃಂಗ ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತ-ರಷ್ಯಾದ 21 ನೇ ಶೃಂಗಸಭೆಯಲ್ಲಿ ಭಾಗವಹಿಸಲು ಡಿಸೆಂಬರ್ 6 ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಭಾರತ ರಷ್ಯಾ ದ್ವಿಪಕ್ಷೀಯ ಸಂಭಂದ ವೃದ್ಧಿ ಕುರಿತು ಉಭಾ ನಾಯಕರು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಮೂಲಗಳು ತಿಳಿಸಿವೆ.

ಪುಟಿನ್ ಜತೆಯಲ್ಲಿ ರಷ್ಯಾದ ರಕ್ಷಣಾ ಸಚಿವರು ಹಾಗು ವಿದೇಶಾಂಗ ಸಚಿವರೂ ಭಾರತಕ್ಕೆ ಭೇಟಿ ನೀಡಲಿದ್ದು ಭಾರತದ ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜತೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಸಂಬಂಧಗಳ ಜತೆಗೆ ಏಷಿಯಾ ಫೆಸಿಫಿಕ್ ಪ್ರದೇಶ, ಅಘಾನಿಸ್ತಾನ ಹಾಗು ಸಿರಿಯಾಗಳಲ್ಲಿನ ಪ್ರಸಕ್ತ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments