HomeNationalಶಸ್ತ್ರಾಸ್ತ್ರ ಒಪ್ಪಿಸಿ, ಯುದ್ಧ ನಿಲ್ಲಿಸುತ್ತೇವೆ: ಮತ್ತೊಮ್ಮೆ ಎಚ್ಚರಿಸಿದ ರಷ್ಯಾ

ಶಸ್ತ್ರಾಸ್ತ್ರ ಒಪ್ಪಿಸಿ, ಯುದ್ಧ ನಿಲ್ಲಿಸುತ್ತೇವೆ: ಮತ್ತೊಮ್ಮೆ ಎಚ್ಚರಿಸಿದ ರಷ್ಯಾ

ಮಾಸ್ಕೊ: ಯುದ್ಧದಿಂದ ಅಪಾರ ಹಾನಿಗೊಳಗಾಗಿರುವ ಉಕ್ರೇನ್ ದೇಶದ ಅಧ್ಯಕ್ಷ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಸಂಧಾನಕ್ಕೆ ಆಹ್ವಾನಿಸಿದ್ದು, ಉಕ್ರೇನಿಯನ್ ಸೇನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಯುದ್ಧ ನಿಲ್ಲಿಸಿ ಮಾತುಕತೆಗೆ ಸಿದ್ಧ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ನಾಗರಿಕ ಮೂಲಸೌಕರ್ಯಗಳ ಮೇಲೆ ನಾವು ಧಾಳಿ ನಡೆಸುತ್ತಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಹೇಳಿದ್ದಾರೆ. ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿ ಆಯಾ ನಂತ್ರ ಸಂಧಾನದ ಮಾತನಾಡಲಿ ಎಂದು ಅವರು ಹೇಳಿದ್ದಾರೆ.

ಇನ್ನು ರಷ್ಯಾ ಧಾಳಿಯಲ್ಲಿ ಉಕ್ರೇನ್ ನಾಗರಿಕರು ಕೂಡ ಸಾವಿಗೀಡಾಗಿದ್ದು, ಇಲ್ಲಿವರೆಗೆ ಸುಮಾರು 25 ಉಕ್ರೇನ್ ನಾಗರಿಕರ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸುವಾಗ ನಾವು ನಾಗರಿಕರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದ್ದರು. ಆದರೆ ಇದೀಗ ಉಕ್ರೇನ್ ನಾಗರಿಕರ ಮೇಲೂ ಧಾಳಿಗಳಾಗುತ್ತಿರುವುದು ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments