HomeKarnatakaಹೇಗಿದ್ದ ಅಪೂರ್ವ ಹೇಗಾದಳು?: ಮೋಸದ ಲವ್ ಜಿಹಾದಿಗೆ ಮತ್ತೊಂದು ಸೇರ್ಪಡೆಯಷ್ಟೇ

ಹೇಗಿದ್ದ ಅಪೂರ್ವ ಹೇಗಾದಳು?: ಮೋಸದ ಲವ್ ಜಿಹಾದಿಗೆ ಮತ್ತೊಂದು ಸೇರ್ಪಡೆಯಷ್ಟೇ

ಗದಗ: ಕೆಲದಿನಗಳ ಹಿಂದೆ ಗದಗ ನಗರದ ಲಾಯನ್ ಸ್ಕೂಲ್ ಮೈದಾನಕ್ಕೆ ದ್ವಿಚಕ್ರ ವಾಹನ ಕಲಿಯಲು ಹೋದ ಹಿಂದೂ ಪತ್ನಿಯನ್ನು, ಮುಸ್ಲಿಂ ಪತಿಯೊಬ್ಬ ಮೈದಾನದಲ್ಲೇ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಿಮಗೆ ತಿಳಿದಿರಬಹುದು. ಇದೀಗ ಗಾಯಗೊಂಡ ಆಕೆಯ ಮುಖದ ಚಿತ್ರಗಳು ಸಿಕ್ಕಿದ್ದು ಮೋಸದ ಲವ್ ಜಿಹಾದಿಗೆ ಬಲಿಯಾಗಿ ಈಗ ಪ್ರಾಯಶ್ಚಿತ ಅನುಭವಿಸುವ ಸ್ಥಿತಿ ಅವಳದಾಗಿದೆ.

ಅಪೂರ್ವ ಎಂಬ ಬ್ರಾಹ್ಮಣರ ಹುಡುಗಿ ಆಟೋ ಡ್ರೈವರ್ ಇಜಾಜ್ ಎಂಬ ಮುಸ್ಲಿಮನನ್ನು ಪ್ರೀತಿಸಿ ಮದುವೆಯಾಗಿದ್ದಳು. 2018ರಲ್ಲಿ ನಡೆದ ಮದುವೆ ನಂತರ ಮತಾಂತರವಾಗಿದ್ದ ಅಪೂರ್ವ ಅರ್ಫಾಬಾನು ಆಗಿ ಬದಲಾಗಿದ್ದಳು. ಆರೋಪಿ ಇಜಾಜ್ ಹುಬ್ಬಳ್ಳಿ ಕೌಲಬಜಾರ್ನ‌ ನಿವಾಸಿಯಾಗಿದ್ದು ಈ ಮೊದಲೇ ಒಂದು ಮದುವೆಯಾದ ಬಗ್ಗೆ ಅಪೂರ್ವಳ ಬಳಿ ಹೇಳದೆ ಅಡಗಿಸಿಟ್ಟಿದ್ದನು. ಅಪೂರ್ವ ಅಲಿಯಾಸ್ ಅರ್ಫಾಬಾನು ಇಜಾಜ್‍ಗೆ 2ನೇ ಹೆಂಡತಿಯಾಗಿದ್ದಳು. ಇಜಾಜ್ ಮೊದಲ ಹೆಂಡತಿಗೆ ಮೂರು ಮಕ್ಕಳು. ಮೊದಲ ಹೆಂಡತಿ ವಿಚಾರ ಇಜಾಜ್ ಅಪೂರ್ವಳ ಮುಂದೆ ಗುಟ್ಟಾಗೇ ಇಟ್ಟಿದ್ದ.

ಯಾವಾಗ ಅಪೂರ್ವಳಿಗೆ ಗಂಡನ ಅಸಲಿಯತ್ತು ತಿಳಿಯಿತೋ ಆಗಿನಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಈ ವಿಚಾರವಾಗಿ ಬೇಸತ್ತು ತವರು ಮನೆ ಸೇರಿದ್ದ ಅಪೂರ್ವ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದೇ ಕಾರಣಕ್ಕೆ ಇಜಾಜ್ ಅಪೂರ್ವಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಮುಗಿಸೋ ಪ್ಲಾನ್ ಮಾಡಿದ್ದ. ಹೆಂಡತಿ ಸ್ಕೂಟಿ ಕಲಿಯಲೆಂದು ಮೈದಾನಕ್ಕೆ ಹೋದ ವೇಳೆ ತಲವಾರಿನಿಂದ ಬರೋಬ್ಬರಿ 22 ಬಾರಿ ಹಲ್ಲೆ ಮಾಡಿದ್ದಾನೆ.

ಗಂಭೀರ ಗಾಯಗೊಂಡು ಮೈದಾನದಲ್ಲಿ ಜೀವ ಹಿಡಿದು ನರಳಾಡುತ್ತಿದ್ದ ಅಪೂರ್ವ ಅಲಿಯಾಸ್ ಅರ್ಫಾಬಾನುವನ್ನು ಸ್ಥಳೀಯರು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮುಖದ ತುಂಬಾ ಮಚ್ಚಿನ ಗಾಯದಿಂದಾಗಿ ಅಪೂರ್ವಳ ಮುಖ ವಿರೂಪವಾಗಿದೆ. ಅವಳದೇ ಮಗ ತನ್ನ ತಾಯಿಯನ್ನು ಗುರುತು ಹಿಡಿಯುತ್ತಿಲ್ಲ ಎಂದು ಅಪೂರ್ವ ಅಳಲು ತೋಡಿಕೊಂಡಿದ್ದಾಳೆ.

ಅಪೂರ್ವ ಮುಸ್ಲಿಂ ಆಗಿ ಮತಾಂತರ ಆಗಿರೋ ಕಾರಣ, ಆಕೆ ಮುಸ್ಲಿಂ ಪದ್ಧತಿ ಪಾಲಿಸಬೇಕು, ಬುರ್ಖಾ ಧರಿಸಬೇಕು, ಹಿಜಾಬ್ ಹಾಕಬೇಕು ಎಂದು ಆರೋಪಿ ಇಜಾಜ್ ಸದಾ ಪೀಡಿಸುತ್ತಿದ್ದ ಎನ್ನಲಾಗಿದೆ. ಹೀಗೆ ಲವ್ ಜಿಹಾದಿನ ವಾಸನೆ ತಿಳಿಯದ ಹಿಂದೂ ಹೆಣ್ಣುಮಕ್ಕಳು ಇತಿಹಾಸದಿಂದ ಪಾಠ ಕಲಿಯದೇ, ಬುದ್ದಿ ಹೇಳುವವರ ಮಾತೂ ಕೇಳದೆ ಮತ್ತೆ ಮತ್ತೆ ಈ ಕೂಪಕ್ಕೆ ತಾವಾಗಿಯೇ ಹೋಗಿ ಬೀಳುತ್ತಿರುವುದು ದುರಂತವೇ ಸರಿ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments