HomeNationalಅಸ್ಸಾಂ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಆಶಿಕುಲ್ ಇಸ್ಲಾಂ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು...

ಅಸ್ಸಾಂ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಆಶಿಕುಲ್ ಇಸ್ಲಾಂ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸಾವು

ಗುಹಾವಟಿ: ಕಳೆದ ವಾರ ಅಸ್ಸಾಂನ ನಗಾಂವ್‌ನ ಬಟದ್ರವಾ ಪೊಲೀಸ್ ಠಾಣೆಯನ್ನು ಮುಸ್ಲಿಂ ದುಷ್ಕರ್ಮಿಗಳು ಸುಟ್ಟುಹಾಕಿದ ಪ್ರಕರಣದಲ್ಲಿ ಗುಂಪನ್ನು ಪ್ರಚೋದಿಸಿದ ಪ್ರಮುಖ ಆರೋಪಿ ಸೋಮವಾರ ಮುಂಜಾನೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಆರೋಪಿ ಆಶಿಕುಲ್ ಇಸ್ಲಾಂ ಸ್ಥಳದಲ್ಲೇ ಸಾವನ್ನಪ್ಪಿದ್ದು ಈ ಘಟನೆಯಲ್ಲಿ ಮೂವರು ಪೊಲೀಸರೂ ಗಾಯಗೊಂಡಿದ್ದಾರೆ. ಆರೋಪಿಯ ಮನೆ ಪರಿಶೀಲನೆ ನಡೆಸಿ ವಾಪಸು ಠಾಣೆಗೆ ಕರೆದೊಯ್ಯುವ ಸಂದರ್ಭ ಈ ಘಟನೆ ನಡೆದಿದೆ. “ಆರೋಪಿ, ಆಶಿಕುಲ್ ಇಸ್ಲಾಂನನ್ನು ಪೊಲೀಸರು ಭಾನುವಾರದಂದು ಬಂಧಿಸಿದ್ದರು ಮತ್ತು ಸೋಮವಾರ ನಾವು ಅವನನ್ನು ವಿಚಾರಣೆಗಾಗಿ ಕರೆದೊಯ್ದಿದ್ದೆವು’ ಎಂದು ನಾಗಾನ್ ಎಸ್ಪಿ ಲೀನಾ ಡೋಲಿ ಹೇಳಿದ್ದಾರೆ.

ವಿಚಾರಣೆ ವೇಳೆ ಆಶಿಕುಲ್ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. “ಆದ್ದರಿಂದ, ನಮ್ಮ ತಂಡವು ಶಸ್ತ್ರಾಸ್ತ್ರಗಳನ್ನು ಹುಡುಕಲು ಹೊರಟಿತು. ಶೋಧ ಕಾರ್ಯಾಚರಣೆ ಮುಗಿದ ನಂತರ, ಹಿಂದಿರುಗುವಾಗ ಅವರು ಕಾರಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮತ್ತು ಅವನ ಹಿಂದೆ ಇದ್ದ ಬೆಂಗಾವಲು ವಾಹನಕ್ಕೆ ಆಕಸ್ಮಿಕವಾಗಿ ಸಿಕ್ಕಿ ಅಫಘಾತ ನಡೆಯಿತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆತ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ಘೋಷಿಸಿದರು.” ಎಂದು ಎಸ್ಪಿ ಲೀನಾ ಅವರು ಹೇಳಿದರು.

ಸಲೋನಬೋರಿ ಗ್ರಾಮದ 39 ವರ್ಷದ ಸ್ಥಳೀಯ ಮೀನು ಮಾರಾಟಗಾರ ಸಫಿಕುಲ್ ಇಸ್ಲಾಂ ಎಂಬವನ ಪೊಲೀಸ್ ಕಸ್ಟಡಿ ಸಾವಿನ ನಂತರ ಧಿಂಗ್ ವೃತ್ತದ ಬಟದ್ರವಾ ಪೊಲೀಸ್ ಠಾಣೆಗೆ ಮುಸ್ಲಿಂ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿತ್ತು.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments