
ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ತಮಿಳು ನಟ ಪ್ರಭುದೇವ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬಹುಭಾಷಾ ಸಿನೆಮಾವೊಂದು ಸೆಟ್ಟೇರಿದ್ದು ಇದೇ ತಿಂಗಳ 9ರಂದು ಚಿತ್ರೀಕರಣ ಆರಂಭವಾಗಲಿದೆ. ಯೋಗರಾಜ್ ಭಟ್ ಆಕ್ಷನ್ ಹೇಳಲಿರುವ ಈ ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಲಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಮೂಹೂರ್ತ ಜೂ.9ರಂದು ನಡೆಯಲಿದ್ದು, ಬೆಂಗಳೂರಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ. ಇದೊಂದು ಬಿಗ್ ಬಜೆಟ್ ಚಿತ್ರವಾಗಿರಲಿದ್ದು ದೊಡ್ಡ ನಟರ ತಂಡ ಇರುವುದರಿಂದ ಹೊಸ ರೀತಿಯ ಸಿನಿಮಾ ಇದಾಗಲಿದೆ ಎಂದು ಅಂದಾಜಿಸಲಾಗಿದೆ.
ಸಿನಿಮಾ ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಹೊಂದಿದ್ದು, ಈಗಾಗಲೇ ಕಥೆ ಕೇಳಿ ಶಿವಣ್ಣ ಮತ್ತು ಪ್ರಭುದೇವ ಥ್ರಿಲ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾಂಬಿನೇಷನ್ನಿನಲ್ಲಿ ಸಿನೆಮಾ ಬರಲಿದೆ ಎಂದು 2020ರಲ್ಲಿ ಸುದ್ದಿ ಕೇಳಿ ಬಂದಿತ್ತು. ಮುಂದೆ ಕೋವಿಡ್ ಹಾಗು ಬ್ಯುಸಿ ಶೆಡ್ಯೂಲ್ ಕಾರಣ ಚಿತ್ರ ಮುಂದಕ್ಕೆ ಹೋಗಿತ್ತು.












































