
ಆಡಿಲೇಡ್: ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಸಂಭಾವ್ಯ ತಂಡ ಎಂದೇ ಪರಿಗಣಿತವಾಗಿದ್ದ ಹಾಗು ಅದಕ್ಕೆ ತಕ್ಕುದಾಗಿಯೇ ಆಡಿದ್ದ ದ. ಆಫ್ರಿಕಾ ಕ್ರಿಕೆಟ್ ಶಿಶು ನೆದರ್ಲೆಂಡ್ ಎದುರು 13 ರನ್ನುಗಳಿಂದ ಹೀನಾಯವಾಗಿ ಸೋಲುವ ಮೂಲಕ ಕೂಟದಿಂದ ಹೊರಬಿದ್ದಿದೆ. ಈ ಪಲಿತಾಂಶದಿಂದಾಗಿ ಭಾರತ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಭಾರತ ತಂಡ ಜಿಂಬಾಬ್ವೆ ತಂಡದ ವಿರುದ್ಧ ಸೆಣಸುವ ಮುನ್ನವೇ ಸೆಮಿಫೈನಲ್ ಪ್ರವೇಶಿಸಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 13 ರನ್ ಗಳಿಂದ ಸೋಲಿಗೆ ಶರಣಾದ ನಂತರ ಭಾರತ ತಂಡಕ್ಕೆ ಅದೃಷ್ಟ ಖುಲಾಯಿಸಿದೆ. ಮತ್ತೊಂದು ತಂಡವಾಗಿ ಗುಂಪಿನಿಂದ ಸೆಮೀಫೈನಲಿಗೆ ಪ್ರವೇಶಿಸಲು ಒಂದು ಹಂತದಲ್ಲಿ ಆಸೆಯೇ ಬಿಟ್ಟಿದ್ದ ಪಾಕಿಸ್ತಾನ ಬಾಂಗ್ಲಾ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಬಾಂಗ್ಲಾ ಪಾಕ್ ವಿರುದ್ಧದ ಪಂದ್ಯ ಇಂದೇ ನಡೆಯುತ್ತಿದ್ದು ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.
ಆಡಿಲೇಡ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 4 ವಿಕೆಟ್ ನಷ್ಟಕ್ಕೆ 158 ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಅವಮಾನಕರವಾಗಿ ಹೊರ ಬಿದ್ದಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































