
ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಹಿಂದೂ ಪವಿತ್ರ ವಿಶ್ವನಾಥನ ಕ್ಷೇತ್ರದ ಬಳಿ ಇರುವ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ಕೋರಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಸ್ಥಳೀಯ ಕೋರ್ಟ್ ಪುರಸ್ಕರಿಸಿದೆ.
ಪೂಜೆಗೆ ಅನುಮತಿ ನೀಡದಂತೆ ಆಕ್ಷೇಪ ಮಾಡಿದ್ದ ಮಸೀದಿ ಸಮಿತಿಯ ಅರ್ಜಿಯನ್ನು ತ್ವರಿತಗತಿಯ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಕುಮಾರ್ ಪಾಂಡೆ ತಿರಸ್ಕರಿಸಿದ್ದಾರೆ. ಹಿಂದೂ ಪರ ಅರ್ಜಿಯ ಮುಂದಿನ ವಿಚಾರಣೆಯನ್ನು ಡಿ.2ರಂದು ಕೈಗೆತ್ತಿಕೊಳ್ಳಲಾಗುತ್ತದೆ. 1991ರಲ್ಲಿ ಜಾರಿಯಾಗಿರುವ ಪೂಜಾ ಸ್ಥಳಗಳ ಕಾಯ್ದೆಯ ಅನ್ವಯ ಜ್ಞಾನವಾಪಿ ಮಸೀದಿಯಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಪ್ರತಿಪಾದಿಸಿತ್ತು. ಹಿಂದೂ ಪರ ವಕೀಲರು ವಕ್ಫ್ ಕಾಯ್ದೆಯಲ್ಲಿನ ಅಂಶಗಳು ಈ ವಿಷಯದಲ್ಲಿ ಅನ್ವಯವಾಗದು ಎಂದು ವಾದಿಸಿದರು.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































