HomeCoastalಬಂಟ್ವಾಳ: ಬೆಂಗಳೂರು ಬಸ್ಸಿನಲ್ಲಿ ಅನ್ಯಕೋಮಿನ ಯುವಕನ ಜತೆ ಹಿಂದೂ ಹುಡುಗಿ; ತಡೆದ ಹಿಂದೂ ಕಾರ್ಯಕರ್ತರಿಗೇ ಆವಾಜ್...

ಬಂಟ್ವಾಳ: ಬೆಂಗಳೂರು ಬಸ್ಸಿನಲ್ಲಿ ಅನ್ಯಕೋಮಿನ ಯುವಕನ ಜತೆ ಹಿಂದೂ ಹುಡುಗಿ; ತಡೆದ ಹಿಂದೂ ಕಾರ್ಯಕರ್ತರಿಗೇ ಆವಾಜ್ ಹಾಕಿದ ಯುವತಿ

ಬಂಟ್ವಾಳ: ಲವ್ ಜಿಹಾದ್ ಪ್ರಕರಣಗಳು, ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತುವುದು, ಸಾರ್ವಜನಿಕರು ಅವರನ್ನು ಹಿಡಿದು ಜಾಡಿಸುವುದು ಮುಂದುವರೆದಿರುವಂತೆಯೇ ಬಂಟ್ವಾಳದಲ್ಲಿ ಇಂತವುದೇ ಪ್ರಕರಣ ವರದಿಯಾಗಿದೆ. ದುರ್ಗಂಬಾ ಬಸ್ಸಿನಲ್ಲಿ ಬೆಂಗಳೂರಿಗೆ ಅನ್ಯಕೋಮಿನ ಯುವಕನ ಜತೆ ಹಿಂದೂ ಹುಡುಗಿ ಪಕ್ಕದ ಪಕ್ಕದ ಸೀಟಿನಲ್ಲಿ ಜತೆಯಾಗಿ ಪ್ರಯಾಣಿಸುತ್ತಿದ್ದರು. ಇದನ್ನು ಅರಿತ ಕಲ್ಲಡ್ಕ ಹಿಂದೂ ಕಾರ್ಯಕರ್ತರು ದಾಸಕೋಡಿಯಲ್ಲಿ ಬಸ್ಸನ್ನು ತಡೆದಿ ನಿಲ್ಲಿಸಿ ಇಬ್ಬರಿಗೂ ಸರಿಯಾಗಿ ವಿಚಾರಿಸಿದ್ದಾರೆ.

ತಡೆದು ನಿಲ್ಲಿಸಿದ್ದಕ್ಕೆ ಆವೇಶಭರಿತಳಾದ ಯುವತಿ, “ನಾವು ನಮ್ಮ ಕಾಸಿನಲ್ಲಿ ಹೋಗುತ್ತಿದ್ದೇವೆ ನಿಮಗೇಕೆ ಉಸಾಬರಿ, ಅಡ್ಡ ಬರಬೇಡಿ ಆಯ್ತಾ?” ಎನ್ನುವಂತೆ ಹಿಂದೂ ಕಾರ್ಯಕರ್ತರೊಡನೆ ವಾಗ್ವಾದಕ್ಕೆ ಇಳಿದಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ಇಬ್ಬರ ಹೆತ್ತವರನ್ನು ಕರೆಸಿ ಮಾತುಕತೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ.

ಮುಸ್ಲಿಂ ಯುವಕ ಮೊಹಮ್ಮದ್ ರಯೀಫ್ ಐಡಿ ಕಾರ್ಡಿನಲ್ಲಿ ಆತ ಭಟ್ಕಳ ಮೂಲದವನು ಎಂದು ತಿಳಿದು ಬಂದಿದ್ದು ವೃತ್ತಿಯಲ್ಲಿ ವಕೀಲನಾಗಿದ್ದಾನೆ. ಯುವತಿ ಜತೆ ಆತನ ಸಂಪರ್ಕ ಹೇಗೆ ಎಂದು ತಿಳಿದುಬಂದಿಲ್ಲ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments