
ಹ್ಯುಂಡೈ ಮುಂಬರುವ 2024 ಕ್ರೆಟಾ ಫೇಸ್ ಲಿಫ್ಟ್ ಅನ್ನು ಜನವರಿ 16 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. ಬುಕ್ಕಿಂಗ್‌ಗಳು ಈಗ ತೆರೆದಿದ್ದು 25,000 ರೂಪಾಯಿ ಟೋಕನ್ ಪಾವತಿ ಮಾಡಿ ನೂತನ ಕ್ರೇಟಾ ಫೇಸ್ ಲಿಫ್ಟ್ ೨೦೨೪ ಅನ್ನು ಖರೀದಿಸಬಹುದು. ಕ್ರೆಟಾ ಫೇಸ್‌ಲಿಫ್ಟ್‌ನ ಹೊರಭಾಗ ಮತ್ತು ಒಳಭಾಗ ಎರಡರಲ್ಲೂ ಗಮನಾರ್ಹ ಮಾರ್ಪಾಡುಗಳನ್ನು ನಿರೀಕ್ಷಿಸಲಾಗಿದೆ. ಕ್ಯಾಬಿನ್ ಮರುವಿನ್ಯಾಸದ ಬಗ್ಗೆ ಕಾರ್ ಪ್ರಿಯರಲ್ಲಿ ಕುತೂಹಲ ಮನೆ ಮಾಡಿದೆ.
ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್ ಈ ಬಾರಿ ತನ್ನ ಡ್ಯಾಶ್‌ಬೋರ್ಡ್ ವಿನ್ಯಾಸಕ್ಕೆ ಹೆಚ್ಚು ಗಮನ ಗೊಡುತ್ತಿದೆ. ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳ ಉಪಸ್ಥಿತಿಯು ಗಮನಾರ್ಹವಾಗಿದೆ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನಲ್ಲಿ ಕೂಡ ಬದಲಾವಣೆ ತರುವ ನಿರೀಕ್ಷೆ ಇದೆ. ಹೆಚ್ಚುವರಿಯಾಗಿ, ಅಲ್ಕಾಜರ್ ಕಾರಿನ ಮಾದರಿಯಿಂದ ಎರವಲು ಪಡೆದ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಂಯೋಜಿಸಲಾಗುತ್ತದೆ.
ಪರಿಷ್ಕರಿಸಿದ ಸೆಂಟರ್ ಕನ್ಸೋಲ್, ಮರುವಿನ್ಯಾಸಗೊಳಿಸಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅದರ ಕೆಳ ಭಾಗದಲ್ಲಿ ಹೊಸ ಟಚ್ ನಿಯಂತ್ರಿತ ಎಸಿ, ಮರು ವಿನ್ಯಾಸಗೊಂಡ ಗೇರ್ ಲಿವರ್ ಮತ್ತು ಸ್ಟೋರೇಜ್ ಪ್ಲೇಸ್ ಈ ಬಾರಿಯ ಹೈಲೈಟ್. ಕ್ರೆಟಾ ಫೇಸ್‌ಲಿಫ್ಟ್ ಬ್ಯಾಕ್‌ಲಿಟ್ ಸ್ವಿಚ್‌ಗಳು, ಫೋರ್-ಸ್ಪೋಕ್ ಸ್ಟೀರಿಂಗ್ ವೀಲ್, ಸೆಂಟರ್ ಆರ್ಮ್‌ರೆಸ್ಟ್, ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಅಧಿಕೃತವಾಗಿ 2024 ಕ್ರೆಟಾ ಏಳು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಿಕೊಂಡಿದೆ. ಅವುಗಳೆಂದರೆ E, EX, S, S(O), SX, SX Tech, ಮತ್ತು SX (O). ಆರು ಸಿಂಗಲ್-ಟೋನ್ ಮತ್ತು ಒಂದು ಡ್ಯುಯಲ್-ಟೋನ್ ಕಲರ್ ಆಯ್ಕೆಯನ್ನು ಒಳಗೊಂಡಿರುತ್ತದೆ. ಎಂಜಿನ್ ಆಯ್ಕೆಗಳ ವಿಷಯದಲ್ಲಿ ಮಧ್ಯಮ ಗಾತ್ರದ SUV ಮೂರು ಆಯ್ಕೆಗಳನ್ನು ನೀಡುತ್ತದೆ: 1.5L MPi ಪೆಟ್ರೋಲ್, 1.5L U2 CRDi ಡೀಸೆಲ್ ಮತ್ತು 1.5L ಕಪ್ಪಾ ಟರ್ಬೊ GDi ಪೆಟ್ರೋಲ್ ಎಂಜಿನ್.
ಕ್ರೆಟಾ ಫೇಸ್ ಲಿಫ್ಟ್ 2024ರ ಎಕ್ಸ್ ಶೋ ರೂಮ್ ಬೆಲೆ 10.50 ಲಕ್ಷದಿಂದ ಆರಂಭವಾಗುತ್ತವೆ ಎಂದು ಅಂದಾಜಿಸಲಾಗಿದೆ. ಮುಂಬರುವ ಕ್ರೆಟಾವು ಬಿಡುಗಡೆಯಾದ ನಂತರ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಟಾಟಾ ಹ್ಯಾರಿಯರ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ನಂತಹ ಕಾರುಗಳಿಗೆ ಸ್ಪರ್ಧೆ ನೀಡಲಿದೆ.
ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd