National

ಸೋಮಾಲಿಯಾ: 15 ಮಂದಿ ಭಾರತೀಯರಿದ್ದ ಕಾರ್ಗೋ ಹಡಗು ಅಪಹರಣ: ರಕ್ಷಣೆಗೆ ಭಾರತೀಯ ನೌಕಾಪಡೆ ದೌಡು

ನವದೆಹಲಿ : ಸೋಮಾಲಿಯಾ ಕರಾವಳಿಯ ತೀರದಲ್ಲಿ ಗುರುವಾರ ಸಂಜೆ 15 ಮಂದಿ ಭಾರತೀಯರಿದ್ದ MV LILA NORFOLK ಎಂಬ ಸರಕು ಸಾಗಣೆ ಹಡಗನ್ನು ಅಪಹರಣ ಮಾಡಲಾಗಿದ್ದು ಭಾರತೀಯ ನೌಕಾಪಡೆಯು ಅದರತ್ತ ಯುದ್ಧನೌಕೆಯನ್ನು ಕಳುಹಿಸಿದೆ.

ಸೇನಾ ಅಧಿಕಾರಿಗಳ ಪ್ರಕಾರ ಸೊಮಾಲಿಯಾ ಕರಾವಳಿಯಲ್ಲಿ ಹಡಗನ್ನು ಅಪಹರಿಸಿರುವ ಬಗ್ಗೆ ಗುರುವಾರ ಸಂಜೆ ಮಾಹಿತಿ ಲಭಿಸಿದೆ. ಮಾಹಿತಿ ಸಿಕ್ಕ ತಕ್ಷಣ ಭಾರತೀಯ ನೌಕಾಪಡೆಯ ವಿಮಾನ ಹಡಗಿನ ಮೇಲೆ ಕಣ್ಗಾವಲು ಇಟ್ಟಿದೆ. ಜತೆಗೆ ಹೆಚ್ಚಿನ ರಕ್ಷಣೆಗಾಗಿ ಭಾರತೀಯ ನೌಕಾಪಡೆಯ INS ಯುದ್ಧನೌಕೆ ಸ್ಥಳಕ್ಕೆ ಧಾವಿಸಿದೆ.

Exit mobile version