
ಭಾರತದ ಅತಿದೊಡ್ಡ ಕಾರು ತಯಾರಕ, ಮಾರುತಿ ಸುಜುಕಿ ಆಟೋಮೊಬೈಲ್ ಲಿಮಿಟೆಡ್, ಫ್ರೆಬ್ರವರಿ ತಿಂಗಳ ಅಂಕಿ ಅಂಶ ಪ್ರಕಾರ ಮಾರಾಟದ ವಿಷಯದಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದೆ. ಮಾರುತಿ ಕಂಪನಿಯ ಕಾರುಗಳ ಪೈಕಿ ಮಾರುತಿ ಸ್ವಿಫ್ಟ್ ಮೊದಲ ಸ್ಥಾನದಲ್ಲಿದೆ.
ಮಾರುತಿಯ ಸ್ವಿಫ್ಟ್ ಈ ಹಿಂದೆ ಮಾರುತಿ ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದ್ದ ವ್ಯಾಗನ್ ಆರ್ ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್ ನವೆಂಬರ್ 2021 ರಿಂದ ಮೊದಲ ಸ್ಥಾನದಲ್ಲಿತ್ತು. ಫೆಬ್ರವರಿಯಲ್ಲಿ 19,200 ಮಾರುತಿ ಸ್ವಿಫ್ಟ್ ಮಾರಾಟವಾಗಿದೆ. ಜನವರಿ 2022 ಕ್ಕೆ ಹೋಲಿಸಿದರೆ ಮಾರುತಿ ಸುಜುಕಿ 3500 ಯುನಿಟ್‌ಗಳನ್ನು ಹೆಚ್ಚುವರಿ ಮಾರಾಟ ಮಾಡಿದೆ. ವ್ಯಾಗನ್ ಆರ್ ಫೆಬ್ರವರಿ ತಿಂಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಮಾರಾಟವು ಫೆಬ್ರವರಿ 2021ಕ್ಕೆ ಹೋಲಿಸಿದರೆ ಸುಮಾರು 20 ಪ್ರತಿಶತದಷ್ಟು ಕುಸಿದಿದೆ.
ಎರಡನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್:
ಟಾಟಾ ನೆಕ್ಸಾನ್ 12,259 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ತನ್ನ ಸೇಲ್ಸ್ ಅನ್ನು ಹೆಚ್ಚಿಸಿಕೊಂಡಿದೆ. ಈ ಕಾರನ್ನು ಹಲವು ನವೀಕರಣಗಳು ಮತ್ತು ವಿಶೇಷ ಆವೃತ್ತಿಗಳೊಂದಿಗೆ ಬಿಡುಗಡೆ ಮಾಡಲಾಗಿದೆ ಮತ್ತು ಕಳೆದ ಹಲವಾರು ತಿಂಗಳುಗಳಿಂದ ಟಾಟಾದ ಅತ್ಯುತ್ತಮ ಮಾರಾಟವಾದ ಕಾರಾಗಿದೆ. ಮಾರುತಿ ಸುಜುಕಿಯ ಎರ್ಟಿಗಾ ಫೆಬ್ರವರಿಯಲ್ಲಿ 11,649 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಫೆಬ್ರವರಿ 2021 ರಿಂದ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಮಾರುತಿಯ ಮತ್ತೊಂದು ಕಾರು ಆಲ್ಟೊ ಮಾರಾಟದಲ್ಲಿ ಶೇಕಡಾ 30 ರಷ್ಟು ಕುಸಿತವನ್ನು ದಾಖಲಿಸಿದೆ ಮತ್ತು ಈ ವರ್ಷ 5500 ಯುನಿಟ್‌ಗಳನ್ನು ಕಡಿಮೆ ಮಾರಾಟ ಮಾಡಿದೆ. ಮಹೀಂದ್ರ ಬೊಲೆರೊ ಎಂಟನೇ ಸ್ಥಾನದಲ್ಲಿದೆ, ಅದರ ಮಾರಾಟದಲ್ಲಿ 120 ಪ್ರತಿಶತದಷ್ಟು ಹೆಚ್ಚಳ ಮತ್ತು ಮಾಸಿಕ ಮಾರಾಟವು 200 ಪ್ರತಿಶತಕ್ಕಿಂತ ಹೆಚ್ಚಿದೆ. ಹ್ಯುಂಡೈ ವೆನ್ಯೂ 10,000 ಕ್ಕೂ ಹೆಚ್ಚು ಯುನಿಟ್ ಮಾರಾಟದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಹತ್ತನೇ ಸ್ಥಾನದಲ್ಲಿ ಮಾರುತಿ ಸೆಲೆರಿಯೊ ಇದ್ದು, ಇದು ತನ್ನ ಮಾರಾಟದಲ್ಲಿ ಸುಮಾರು 60 ಪ್ರತಿಶತದಷ್ಟು ಏರಿಕೆಯನ್ನು ದಾಖಲಿಸಿದೆ.