
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಬಹು ನಿರೀಕ್ಷಿತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹೊಸ ನೆಕ್ಸಾ ಬೆಲಾನೋಗಾಗಿ ಬುಕಿಂಗ್ ಆರಂಭವನ್ನು ಘೋಷಿಸಿದೆ. ಗ್ರಾಹಕರು ತಮ್ಮ ಸಮೀಪದ ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ 11,000 ರೂಪಾಯಿಗಳನ್ನು ಪಾವತಿಸಿ ಅಥವಾ ಆನ್‌ಲೈನ್ ಮಾರಾಟ ಚಾನಲ್ ಮೂಲಕ ಬಲೆನೊ ಅನ್ನು ಬುಕ್ ಮಾಡಬಹುದು.
ಹೊಸ ಬಲೆನೊ ಹಲವು ಬದಲಾವಣೆಗಳ ನಡುವೆ ಸೆಗ್ಮೆಂಟ್ ಫರ್ಸ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಮಾರುತಿ ಸುಜುಕಿ ಬಲೆನೊ ಫರ್ಸ್ಟ್ ಇನ್ ಸೆಗ್ಮೆಂಟ್ ಹೆಡ್ ಅಪ್ ಡಿಸ್ಪ್ಲೇ ಅನ್ನು ಹೊಂದಿದ್ದು ಉತ್ತಮ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಹೆಡ್ ಅಪ್ ಡಿಸ್ಪ್ಲೇಯಿಂದಾಗಿ ಸ್ಪೀಡೋಮೀಟರ್, ಕ್ಲೈಮೇಟ್ ಕಂಟ್ರೋಲ್ ಇತ್ಯಾದಿಗಳಿಂದ ಪ್ರಮುಖ ಮಾಹಿತಿಯನ್ನು ರಸ್ತೆಯಿಂದ ತಮ್ಮ ಕಣ್ಣುಗಳನ್ನು ತೆಗೆಯದೆಯೇ ತಿಳಿದುಕೊಳ್ಳಬಹುದಾಗಿದ್ದು ವಾಹನ ಚಲಾಯಿಸಲು ಗ್ರಾಹಕರಿಗೆ ಗಮನ ನೀಡಲು ಅನುಕೂಲವಾಗುತ್ತದೆ.
ಹೊಸ ಬಲೆನೊ ನೆಕ್ಸ್ಟ್-ಜೆನ್ ಕೆ-ಸೀರೀಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್ ಜೊತೆಗೆ ಐಡಲ್ ಸ್ಟಾರ್ಟ್-ಸ್ಟಾಪ್ ಅನ್ನು ಹೊಂದಿರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್‌ಬಾಕ್ಸ್ ಅನ್ನು ಹೊಂದಿರಲಿದೆ.
ತನ್ನ ಹೊಸತನದಿಂದಾಗಿ ಹೊಸ ಬಲೆನೊ ತನ್ನ ಹ್ಯಾಚ್-ಬ್ಯಾಕ್ ಪ್ರತಿಸ್ಪರ್ಧಿಗಳಾದ ಹ್ಯುಂಡೈ i20, ಟಾಟಾ ಆಲ್ಟ್ರೊಜ್ ಮತ್ತು ಫೋಕ್ಸ್‌ವ್ಯಾಗನ್ ಪೊಲೊ ವಿರುದ್ಧ ಮತ್ತೆ ಸ್ಪರ್ಧಿಸಲು ಅಣಿಯಾಗಿದೆ.












































