Coastal

ಹಿಜಾಬ್ ನಿಷೇಧ: ಮಂಗಳೂರು ಕಾಲೇಜಿನಿಂದ ಟಿಸಿ ಕೇಳಿರುವ 5 ಮುಸ್ಲಿಂ ವಿದ್ಯಾರ್ಥಿನಿಯರು

ಮಂಗಳೂರು: ಹಿಜಾಬ್ ನಿಷೇಧದ ಕಾರಣ ಹೈಕೋರ್ಟಿನ ತೀರ್ಪಿನ ನಂತರವೂ ವಿವಾದ್ ಎಬ್ಬಿಸಿದ್ದ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಐವರು ಮುಸ್ಲಿಂ ವಿದ್ಯಾರ್ಥಿನಿಯರು ವರ್ಗಾವಣೆ ಪ್ರಮಾಣಪತ್ರ(ಟಿಸಿ) ನೀಡುವಂತೆ ಕಾಲೇಜು ಆಡಳಿತ ಮಂಡಳಿಗೆ ಕೇಳಿಕೊಂಡಿದ್ದಾರೆ. ಟಿಸಿ ಪಡೆದು ಹಿಜಾಬ್ ಗೆ ಅವಕಾಶ ಇರುವಂತಹ ಕಾಲೇಜಿಗೆ ಸೇರಲು ಅಣಿಯಾಗಿದ್ದಾರೆ. ಆದರೆ ಅವರು ನೀಡಿದ ಮನವಿ ಪತ್ರಗಳು ಅಪೂರ್ಣವಾಗಿದ್ದರಿಂದ, ಹೊಸ ಅರ್ಜಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜು ತರಗತಿಗಳಲ್ಲಿ ಹಿಜಾಬ್ ನಿಷೇಧವನ್ನು ವಿರೋಧಿಸಿ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಗೊಂದಲ ಕೂಡ ಸೃಷ್ಟಿಸಿದ್ದರು. ಆ ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ ಎಸ್ ಯಡಪಡಿತ್ತಾಯ ಅವರು, ವಿದ್ಯಾರ್ಥಿಗಳು ಆಯಾ ಸಂಸ್ಥೆಗಳು ನಿಗದಿಪಡಿಸಿದ ಡ್ರೆಸ್ ಕೋಡ್‌ಗೆ ಬದ್ಧರಾಗಿರಬೇಕು ಮತ್ತು ಹೈಕೋರ್ಟ್ ನಿರ್ದೇಶನವನ್ನು ಅನುಸರಿಸಬೇಕು. ಬೇರೆ ಕಾಲೇಜ್ ಗುಳಿಗೆ ಸೇರಬಯಸುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಿವಿ ವಿಶೇಷ ವ್ಯವಸ್ಥೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಮುಸ್ಲಿಂ ವಿದ್ಯಾರ್ಥಿನಿಯರ ಟಿಸಿ ಕೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜು ಪ್ರಿನ್ಸಿಪಾಲ್ ಅನುಸೂಯಾ ರೈ ಅವರು, ‘ಐವರು ವಿದ್ಯಾರ್ಥಿನಿಯರು ಟಿಸಿ ಕೇಳಿಕೊಂಡು ಬಂದಿದ್ದರು ಮತ್ತು ತಾವು ಹಿಜಾಬ್ ಧರಿಸಲು ಅವಕಾಶ ಇರುವ ಇತರ ಕಾಲೇಜುಗಳಿಗೆ ಸೇರಿಕೊಳ್ಳಲು ಅನುವು ಮಾಡಿಕೊಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version