HomeCoastalಕಾರ್ಕಳ: ಗೋಕಳ್ಳತನ ವಿರುದ್ಧ ಪ್ರತಿಭಟನೆ ವೇಳೆಯಲ್ಲೇ ಮತಾಂಧರಿಂದ ಗೋ ಸಾಗಾಟ

ಕಾರ್ಕಳ: ಗೋಕಳ್ಳತನ ವಿರುದ್ಧ ಪ್ರತಿಭಟನೆ ವೇಳೆಯಲ್ಲೇ ಮತಾಂಧರಿಂದ ಗೋ ಸಾಗಾಟ

ಕಾರ್ಕಳ : ಸೆಪ್ಟೆಂಬರ್ 19ರ ಸಾಯಂಕಾಲ ಶಿರ್ಲಾಲಿನಲ್ಲಿ ಗೋ ಕಳ್ಳತನದ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಸಮಯದಲ್ಲೇ ಗೋ ಕಳ್ಳತನ ಮಾಡಿ ಸಾಗಾಟಕ್ಕೆ ಯತ್ನಿಸಿದ ಘಟನೆ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಿಂದ ಗೋ ಕಳ್ಳರ ಯತ್ನವನ್ನು ವಿಫಲಗೊಳಿಸಲಾಗಿದ್ದು 2 ಗೋವುಗಳನ್ನು ರಕ್ಷಿಸಲಾಗಿದೆ.

ಪ್ರತಿಭಟನೆ ಮುಗಿಸಿ ವಾಪಾಸ್ ತೆರಳುತ್ತಿದ್ದ ವೇಳೆ ಗೋ ಕಳ್ಳತನ ಮಾಡಿ ಕಾರಿನಲ್ಲಿ ಸಾಗಿಸುತ್ತಿರುವ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿದ್ದಾರೆ. ತಪ್ಪಿಸಿಕೊಂಡು ಹೋಗುವ ಸಲುವಾಗಿ ವೇಗವಾಗಿ ಕಾರು ಓಡಿಸಿದ ಪರಿಣಾಮ ಗೋ ಕಳ್ಳರ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಕಾರನ್ನು ಅಲ್ಲೇ ಬಿಟ್ಟು ಗೋ ಕಳ್ಳರು ಓಡಿಹೋಗಿದ್ದಾರೆ.

ಕಾರ್ಯಕರ್ತರು ಸ್ಥಳಕ್ಕೆ ಬಂದಾಗ ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಕೂಡಿ ಹಾಕಲಾಗಿತ್ತು. ಕೂಡಲೇ ಗೋವುಗಳನ್ನು ಯಾವುದೇ ಅಪಾಯವಾಗದಂತೆ ಹೊರಗೆ ತೆಗೆದು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ. ಸೋಮವಾರ 10 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments