HomeCoastalಮಂಗಳೂರು: ನಾಗುರಿ ಕಪಿತಾನಿಯೊ ಬಳಿ ಚಲಿಸುತ್ತಿದ್ದಆಟೋರಿಕ್ಷಾದಲ್ಲಿ ನಿಗೂಢ ಸ್ಫೋಟ, ಇಬ್ಬರು ಗಂಭೀರ

ಮಂಗಳೂರು: ನಾಗುರಿ ಕಪಿತಾನಿಯೊ ಬಳಿ ಚಲಿಸುತ್ತಿದ್ದಆಟೋರಿಕ್ಷಾದಲ್ಲಿ ನಿಗೂಢ ಸ್ಫೋಟ, ಇಬ್ಬರು ಗಂಭೀರ

ಮಂಗಳೂರು : ಮಂಗಳೂರು ನಗರದ ಪಂಪವೆಲ್ ಕಂಕನಾಡಿ ಸಮೀಪದ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಅನುಮಾನಾಸ್ಪದ ಸ್ಪೋಟ ಸಂಭವಿಸಿದ್ದು, ಸ್ಫೋಟದಿಂದಾಗಿ ರಿಕ್ಷಾ ಚಾಲಕ ಹಾಗು ಪ್ರಯಾಣಿಕ ಇಬ್ಬರೂ ಗಾಯಗೊಂಡಿದ್ದಾರೆ.

ಇಂದು (ಶನಿವಾರ) ಸಂಜೆ ಸುಮಾರು 5.30 ರ ವೇಳೆಗೆ ಆಟೋ ರಿಕ್ಷಾ ಕಪಿತಾನಿಯೊ ಶಾಲೆ ಇರುವ ನಾಗುರಿ ಸಮೀಪ ಸಂಚರಿಸುತ್ತಿತ್ತು. ಈ ವೇಳೆ ಚಲಿಸುತ್ತಿದ್ದ ಆಟೋದಲ್ಲಿ ಒಮ್ಮಿಂದೊಮ್ಮೆಲೆ ನಿಗೂಢ ಸ್ಪೋಟ ಸಂಭವಿಸಿದೆ. ಘಟನೆ ಯಲ್ಲಿ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ಆಟೋದಲ್ಲಿ ಛಿದ್ರಗೊಂಡ ಕುಕ್ಕರ್ ಭಾಗಗಳು ಪತ್ತೆಯಾಗಿದೆ. ರಿಕ್ಷಾದಲ್ಲಿನ ಪ್ರಯಾಣಿಕನ ಬಳಿ ಬ್ಯಾಗ್ ಇದ್ದು, ಸ್ಪೋಟಕ್ಕೆ ಏನು ಕಾರಣ ಅನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ನಿಷ್ಟ್ರೀಯ ದಳ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments