HomeCoastalಕುಕ್ಕರ್ ಬಾಂಬ್ ಇಟ್ಟು 50 ಶೇಕಡಾ ಕುಕ್ ಆದ ಉಗ್ರ ಶಾರಿಕ್: ಕುಟುಂಬಸ್ಥರಿಂದ ಗುರುತು ಪತ್ತೆ

ಕುಕ್ಕರ್ ಬಾಂಬ್ ಇಟ್ಟು 50 ಶೇಕಡಾ ಕುಕ್ ಆದ ಉಗ್ರ ಶಾರಿಕ್: ಕುಟುಂಬಸ್ಥರಿಂದ ಗುರುತು ಪತ್ತೆ

ಮಂಗಳೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಉಗ್ರನನ್ನು ಶಾರಿಕ್ ಎಂದು ಗುರುತಿಸಲಾಗಿದೆ. 

ಇಂದು ಶಾರೀಕ್‌‌ನ ಕುಟುಂಬಸ್ಥರು ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸಿ ಆತನ ಗುರುತು ಪತ್ತೆ ಮಾಡಿದ್ದಾರೆ. ಆತ ಮಂಗಳೂರಿನ ಉಗ್ರ ಪರ ಗೋಡೆ ಬರಹ, ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆಸಿದ  ಬಾಂಬ್ ಪರೀಕ್ಷಾ ಸ್ಫೋಟ ಸೇರಿದಂತೆ ಹಲವು ಉಗ್ರ ಪರ ಚಟುವಟಿಕೆಗಳ ಕಾರಣ ಪೊಲೀಸರಿಗೆ ಬೇಕಾಗಿದ್ದ . ಅದಾಗಲೇ ಆತನ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಿಸಿದ್ದರು . ಇದೀಗ ಶಾರಿಕ್ ತಾನಾಗಿಯೇ  ಬಲೆಗೆ  ಬಿದ್ದ ಕಾರಣ ಪೊಲೀಸರಿಗೆ ಕರಾವಳಿಯ  ಉಗ್ರ  ಚಟುವಟಿಕೆ  ತನಿಖೆಯಲ್ಲಿ  ಅತೀ ದೊಡ್ಡ  ಬ್ರೇಕ್ ಸಿಕ್ಕಂತಾಗಿದೆ . 

ಶಂಕಿತ ಶಾರೀಕ್ ಗುರುತು ಪತ್ತೆಗೆ ಶಿವಮೊಗ್ಗದಿಂದ ಮೂವರು ಮಹಿಳೆಯರು ಆಗಮಿಸಿದ್ದು, ಮಹಿಳೆಯಯೊಂದಿಗೆ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಕೂಡ ಆಗಮಿಸಿದ್ದರು. ಶಾರೀಕ್ ಕುಟುಂಬಸ್ಥರು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸಮ್ಮುಖದಲ್ಲಿ ಗುರುತು ಪತ್ತೆ ಮಾಡಿದ್ದಾರೆ.

ಕುಕ್ಕರ್ ಟೈಮ್ ಬಾಂಬ್  ಸಿಡಿದು  ಶಾರಿಕ್ ದೇಹ  ಶೇಕಡಾ 50ರಷ್ಟು  ಸುಟ್ಟು ಹೋಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments