Coastal

ಲವ್ ಜಿಹಾದ್: ಎಚ್ಚೆತ್ತ ಕರಾವಳಿ ಹಿಂದೂ ಸಮಾಜ, ಹೆಲ್ಪ್ ಲೈನ್ ಅಸ್ತಿತ್ವಕ್ಕೆ

ಮಂಗಳೂರು: ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿಕೊಂಡು ಹೆಚ್ಚುತ್ತಿರುವ ಇಸ್ಲಾಮೀ ಲವ್ ಜಿಹಾದ್ ವಿರುದ್ಧ ಇದೀಗ ಕರಾವಳಿಯ ಹಿಂದೂ ಸಮಾಜ ಎಚ್ಚೆತ್ತಿದ್ದು ಸಂತ್ರಸ್ತರ ಅನುಕೂಲಕ್ಕಾಗಿ ಹಾಗು ಜಿಹಾದಿಯರ ಲವ್ ಜಿಹಾದ್ ಯತ್ನಗಳನ್ನು ತಡೆಯುವ ಸಲುವಾಗಿ ಹೆಲ್ಪ್ ಲೈನ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ.

ಎರಡು ವಾಟ್ಸಾಪ್ ಹಾಗು ಕರೆ ನಂಬರ್ ಅನ್ನು ನೀಡಲಾಗಿದ್ದು ಜತೆಗೆ ಇಮೇಲ್ ಐಡಿಯನ್ನು ಕೂಡ ನೀಡಲಾಗಿದೆ. ಸಾರ್ವಜನಿಕರು ಲವ್ ಜಿಹಾದ್ ಬಗೆಗೆ ಶಂಕೆ ಇದ್ದಲ್ಲಿ ಈ ನಂಬರಿಗೆ ಕರೆ ಮಾಡಲು ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು ತಮ್ಮ ತಮ್ಮ ಮನೆ, ನೆರೆಹೊರೆ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಲು ಕೋರಲಾಗಿದೆ. ಅದರಲ್ಲೂ ಪ್ರಮುಖವಾಗಿ ಶಾಲೆ, ಕಾಲೇಜು ಕ್ಯಾಂಪಸ್, ಹಾಗು ಕಚೇರಿಗಳಲ್ಲಿ ಕೆಲಸ ಮಾಡುವ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವ ಸಾಧ್ಯತೆ ಹೆಚ್ಚು, ಹಾಗಾಗಿ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ ಗೆ ಸಂಪರ್ಕಿಸಿ ಎಂದು ತಿಳಿಸಲಾಗಿದೆ.

ಲವ್ ಜಿಹಾದ್ ಪ್ರಕರಣಗಳ ವಿವರ ಹಾಗು ಫೋಟೋ ಇತ್ಯಾದಿ ವಾಟ್ಸಪ್ಪ್ ಮೂಲಕ ಕಳುಹಿಸಬಹುದು. ಲವ್ ಜಿಹಾದ್ ಗೆ ಸಂಬಂಧಪಟ್ಟ ಯಾವುದೇ ಸಲಹೆ, ದೂರುಗಳನ್ನು Email ಮೂಲಕ ಕೂಡ ಕಳುಹಿಸಬಹುದು. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುವುದು ಹಾಗು ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ ಎಂದು ಹಿಂದೂ ಸಮಾಜದ ಪ್ರಮುಖರು ತಿಳಿಸಿದ್ದಾರೆ.

ಲವ್ ಜಿಹಾದ್ ಹೆಲ್ಪ್ ಲೈನ್ ಸಂಖ್ಯೆ : 9148658108 , 9591658108

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version