National

ಮತ್ತೆ ಮತ್ತೆ ಲವ್ ಜಿಹಾದ್ ಮರ್ಡರ್: ಈ ಬಾರಿ ಫ್ರಿಡ್ಜ್, ಸೂಟ್ ಕೇಸ್ ಅಲ್ಲ, ಬೆಡ್ ರೂಮಿನಲ್ಲೇ ದಫನ

ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಂತರ್‌ಧರ್ಮೀಯ ಪ್ರೇಮ ವಿವಾಹ ದಾರುಣ ಅಂತ್ಯ ಕಂಡ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ಯುವಕ ಮದುವೆಯಾಗಿ ಏಳು ವರ್ಷಗಳ ಬಳಿಕ ಆಕೆಯನ್ನು ಕೊಂದಿದ್ದಾನೆ. ಮಹಿಳೆಯು ಪುರುಷನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿದ್ದಳು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮುಸ್ಲಿಂ ಪತಿ ತನ್ನ ಹಿಂದೂ ಹೆಂಡತಿಯನ್ನು ವಿದ್ಯುತ್ ಆಘಾತದಿಂದ ಕೊಂದು ನಂತರ ಶವವನ್ನು ತನ್ನ ಮಲಗುವ ಕೋಣೆಯಲ್ಲಿ ಹೂತಿಟ್ಟಿದ್ದ.

ವಾಸಿ ಮೊಹಮ್ಮದ್ ಫೈಜ್ ಏಳು ವರ್ಷಗಳ ಹಿಂದೆ ಉಮಾ ಶರ್ಮಾಳನ್ನು ಮದುವೆಯಾಗಿದ್ದ. ಮದುವೆಯ ನಂತರ ಮೊಹಮ್ಮದ್ ಫೈಜ್ ಉಮಾಳನ್ನು ಮತಾಂತರಗೊಳಿಸಿ ಆಕೆಗೆ ಅಕ್ಸಾ ಫಾತ್ಮಾ ಎಂದು ಹೆಸರಿಟ್ಟ. ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಎರಡು ದಿನಗಳ ಹಿಂದೆ ಇಂಥದ್ದೊಂದು ಜಗಳದ ಬಳಿಕ ಮೊಹಮ್ಮದ್ ಪತ್ನಿಗೆ ವಿದ್ಯುತ್ ಸ್ಪರ್ಶಿಸಿ ಕೊಲೆ ಮಾಡಿ ಶವವನ್ನು ಮನೆಯ ಕೊಠಡಿಯಲ್ಲಿ ಹೂತು ಹಾಕಿದ್ದ. ಗೋಲ ಗೋಕರ್ಣನಾಥ ಕೊಟ್ವಾಲಿ ಪ್ರದೇಶದ ಹಫೀಜ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನೆಯ ವೇಳೆ ಫೈಜ್‌ನ ತಾಯಿ ಕಾನ್ಪುರದಲ್ಲಿರುವ ಅಳಿಯನ ಮನೆಗೆ ಹೋಗಿದ್ದರು. ಆಕೆ ಹಿಂತಿರುಗಿ ಬಂದಾಗ ಮನೆಯಲ್ಲಿ ಉಮಾ ಕಾಣಲಿಲ್ಲ. ಆಕೆ ಫೈಝ್‌ನನ್ನು ಕೇಳಿದಾಗ, ಅವನು ಏನೇನೊ ಹೇಳಿ ತನ್ನ ತಾಯಿಯನ್ನು ದಾರಿತಪ್ಪಿಸಲು ಪ್ರಯತ್ನಿಸಿದನು. ಬಳಿಕ ಆಕೆಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಕೊಠಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಹಾಗೂ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version