HomeCoastalದೇಶದ ಕೋರ್ಟ್, ಸಂವಿಧಾನಕ್ಕೆ ಕ್ಯಾರೇ ಇಲ್ಲ: ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಏರು ದನಿಯಲ್ಲಿ ಕೂಗಿದ...

ದೇಶದ ಕೋರ್ಟ್, ಸಂವಿಧಾನಕ್ಕೆ ಕ್ಯಾರೇ ಇಲ್ಲ: ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಏರು ದನಿಯಲ್ಲಿ ಕೂಗಿದ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು

ಉಡುಪಿ: ಹಿಜಾಬ್ ವಿವಾದ ತಣ್ಣಗಾಗಿ ಎಲ್ಲ ಸರಿದಾರಿಗೆ ಬರುತ್ತಿರುವಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭ ಕೋರ್ಟ್ ಆದೇಶ ಧಿಕ್ಕರಿಸಿ ತಾವು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಏರು ದನಿಯಲ್ಲಿ ಗೊಬ್ಬೆ ಹಾಕಿ ರಾದ್ಧಾಂತ ಸೃಷ್ಟಿಸಿದ ಘಟನೆ ಉಡುಪಿಯಲ್ಲಿ ಜರಗಿದೆ.

ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯರಾದ ಆಲಿಯಾ ಅಸಾದಿ ಹಾಗು ರೇಶ್ಮ ಎಂಬ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ಕೊನಗೆ ಪರೀಕ್ಷೆ ಬರೆಯದೆ ವಾಪಸಾಗಿದ್ದಾರೆ. ಹಿಜಾಬ್ ವಿವಾದ ಆರಂಭಿಸಿದ 6 ಮಂದಿ ವಿದ್ಯಾರ್ಥಿನಿಯರಲ್ಲಿ ಈ ಇಬ್ಬರೂ ಸೇರಿದ್ದರು. ಈಗಾಗಲೇ ಆ 6 ಮಂದಿಯಲ್ಲಿ ಪ್ರಥಮ ಪಿಯುಸಿಯ ಇಬ್ಬರು ವಿದ್ಯಾರ್ಥಿನಿಯರು ತರಗತಿ ಒಳಗೆ ಹಿಜಾಬ್ ಗೆ ಅವಕಾಶ ಇಲ್ಲದ್ದಕ್ಕೆ ಇತ್ತೀಚಿಗೆ ನಡೆದ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಯನ್ನು ಬರೆದಿರಲಿಲ್ಲ. ಉಳಿದ ನಾಲ್ವರು ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯರಾಗಿದ್ದು ಅವರಲ್ಲಿ ಇಬ್ಬರಿಗೆ ಇಂದು ಪರೀಕ್ಷೆ ಇತ್ತು.

ಬ್ಯುಸಿನೆಸ್ ಸ್ಟಡಿ ಪರೀಕ್ಷೆ ಇದ್ದ ಆಲಿಯಾ ಹಾಗು ರೇಶಂ ಕೊನೆಯ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಸೆಂಟರ್ ಆದ ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಬಂದು ಹಿಜಾಬ್ ಧರಿಸಿಯೇ ಪರೀಕ್ಷಾ ಕೋಣೆಯೊಳಗೆ ಹೋಗುತ್ತೇವೆ ಎಂದು ಹಠ ಹಿಡಿದರು. ಕೋರ್ಟ್ ನಿಯಮ ಹಾಗು ಸರಕಾರದ ಸುತ್ತೋಲೆ ಅನ್ವಯ ಅದಕ್ಕೆ ಅವಕಾಶ ಇಲ್ಲ ಎಂದು ಅವರನ್ನು ತಡೆಯಲಾಯಿತು. ಈ ಸಂದರ್ಭ ಏರು ಧ್ವನಿಯಲ್ಲಿ ಗೊಬ್ಬೆ ಹಾಕಿ ನಾವು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದು ಡ್ರಾಮಾ ಮಾಡುವ ಯತ್ನ ಕೂಡ ಆ ಮತಾಂಧ ವಿದ್ಯಾರ್ಥಿನಿಯರಿಂದ ನಡೆಯಿತು.

ಕೊನೆಗೆ ತಹಸೀಲ್ದಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿದ ಬಳಿಕ ಪೆಚ್ಚು ಮೊರೆ ಹಾಕಿಕೊಂಡು ಪರೀಕ್ಷೆಗೆ ಹಾಜರಾಗದೆ ವಾಪಸು ಮನೆಗೆ ನಡೆದರು.

ಮುಸ್ಲಿಂ ಸಮುದಾಯ ದೇಶದ ಕಾನೂನು, ನ್ಯಾಯಾಲಯ, ಸಂವಿಧಾನಕ್ಕೆ ಕಿಂಚಿತ್ತೂ ಗೌರವ ಕೊಡುವುದಿಲ್ಲ ಎಂಬ ಕಾರಣಕ್ಕೆ ದೇಶಭಕ್ತ ನಾಗರಿಕರು ಎಲ್ಲೆಡೆ ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರದಂತಹ ಕಠಿಣ ಕ್ರಮಗಳನ್ನು ಅಳವಡಿಸಿಕೊಂಡಿದ್ದರು. ಇದೀಗ ಈ ಘಟನೆ ಆ ಬಹಿಷ್ಕಾರಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments