HomeCoastalವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ರಸ್ತೆಯಲ್ಲೇ ಧಗಧಗನೆ ಉರಿದ ಕಾರು

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ರಸ್ತೆಯಲ್ಲೇ ಧಗಧಗನೆ ಉರಿದ ಕಾರು

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡು ಕಾರು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ವಿಟ್ಲಾದ ಕೋಡಪದವು ಸರವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಕೆಲಿಂಜ ನಿವಾಸಿಯಾದ ಸಿಟ್ರಿನ್ ಪಾಯ್ಸ್ ಅವರು ಬೋಳಂತೂರು ಕಡೆಯಿಂದ ವಿಟ್ಲ ಮೂಲಕ ಕೋಡಪದವು ಕಡೆಗೆ ಹೋಗುತ್ತಿದ್ದ ಸಂದರ್ಭ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಶಬ್ದ ಕೇಳಿಸಿದ್ದು ತಕ್ಷಣ ಕಾರನ್ನು ಪರಿಶೀಲಿಸುವ ಸಲುವಾಗಿ ರಸ್ತೆಯ ಬದಿಗೆ ತಂದು ನಿಲ್ಲಿಸಿದ್ದಾರೆ. ಅದಾಗಲೇ ಬೆಂಕಿ ಹತ್ತಿಕೊಂಡಿದ್ದು ತಕ್ಷಣ ಬೆಂಕಿ ಕಾರಿನ ತುಂಬಾ ವ್ಯಾಪಿಸಿದೆ. ಸಿಟ್ರಿನ್ ಅವರು ಕಾರಿನಿಂದ ಹೊರ ಬಂದ ಕರ್ನಾ ಅಪಾಯದಿಂದ ಪಾರಾಗಿದ್ದಾರೆ.

ಕಾರು ಭಾಗಶ ಪೂರ್ತಿ ಸುಟ್ಟು ಹೋಗಿದ್ದು ಶನಿವಾರವಷ್ಟೇ ಕಾರಿನ ದುರಸ್ತಿ ನಡೆದಿತ್ತು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments