Gadjets

Redmi 10 Prime ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ

ಭಾರೀ ನಿರೀಕ್ಷೆಯ ಶಿಯೋಮಿಯ Redmi 10 Prime ಭಾರತದಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ರೆಡ್ಮಿ ಸರಣಿಯಲ್ಲಿ ಹೊಸ ಮಾದರಿಯಾಗಿದ್ದು ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾದ ರೆಡ್‌ಮಿ 9 ಪ್ರೈಮ್‌ ನ ಮುಂದಿನ ಆವೃತ್ತಿಯಾಗಿದೆ.

ರೆಡ್ಮಿ 10 ಪ್ರೈಮ್ 90Hz ಡಿಸ್ಪ್ಲೇ ಮತ್ತು ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು ಮೀಡಿಯಾ ಟೆಕ್ ಹೆಲಿಯೋ G88 SoC ಅನ್ನು ಹೊಂದಿದೆ.

Redmi 10 ಪ್ರೈಮ್’ನ 4GB RAM 64GB ಸ್ಟೋರೇಜ್ ಫೋನಿಗೆ 12,499 ರೂಪಾಯಿ ಬೆಲೆ ಇದ್ದರೆ, 6GB RAM 128GB ಸ್ಟೋರೇಜ್ ಫೋನಿಗೆ 14,499 ರೂ. ಬೆಲೆ ಇರಲಿದೆ. ರೆಡ್ಮಿ 10 ಪ್ರೈಮ್ ಇದೇ ತಿಂಗಳ (ಸೆಪ್ಟೆಂಬರ್) 7 ರಿಂದ ಅಮೆಜಾನ್ ಸೇರಿದಂತೆ ದೇಶದ ಎಲ್ಲ ಮೊಬೈಲ್ ಮಾರಾಟ ಮಳಿಗೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.

ರೆಡ್ಮಿ 10 ಪ್ರೈಮ್ ಆಂಡ್ರಾಯ್ಡ್ 11 ಒಪರೇಟಿಂಗ್ ಸಿಸ್ಟಮ್ ಹೊಂದಿದ್ದು MIUI 12.5ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. 90 ಹರ್ಟ್ಸ್ ರಿಫ್ರೆಶ್ ದರದೊಂದಿಗೆ 6.5 ಇಂಚಿನ ಫುಲ್ ಎಚ್ಡಿ ಡಿಸ್ಪ್ಲೇ ರೆಡ್ಮಿ 10 ಪ್ರೈಮ್’ನಲ್ಲಿದೆ. ಹಿಂಬದಿಯ ಟ್ರಿಪಲ್ ಕ್ಯಾಮೆರಾದಲ್ಲಿ 50 ಮೆಗಾ ಪಿಕ್ಸೆಲಿನ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲಿನ ಅಲ್ಟ್ರಾ ವಯ್ಡ್ ಕ್ಯಾಮೆರಾ ಹಾಗು 2 ಮೆಗಾ ಪಿಕ್ಸೆಲಿನ ಮ್ಯಾಕ್ರೋ ಕ್ಯಾಮೆರಾಗಳಿವೆ. ಪ್ರಾಥಮಿಕ ಕ್ಯಾಮೆರಾದಲ್ಲಿ 1080 ರೆಸೊಲ್ಯೂಶನ್ ಫುಲ್ ಎಚ್ಡಿ ವಿಡಿಯೋಗಳನ್ನು ಚಿತ್ರಿಸಬಹುದಾಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲಿನ ಕ್ಯಾಮೆರಾ ಇರಲಿದೆ. 6000 ಎಂಎಎಚ್ ಬ್ಯಾಟರಿಯು 10ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

Exit mobile version