HomeKarnatakaಬೆಂಗಳೂರಿನ ಈ ಶಾಲೆಯಲ್ಲಿ ಪ್ರತಿಯೊಬ್ಬರೂ ಬ್ಯಾಗ್‌ಗಳಲ್ಲಿ ಬೈಬಲ್‌ ಕೊಂಡೋಗುವುದು ಕಡ್ಡಾಯವಾಗಿದೆ: ನಿಕೃಷ್ಟ ಮಟ್ಟಕ್ಕೆ ಮತ ಪ್ರಚಾರ

ಬೆಂಗಳೂರಿನ ಈ ಶಾಲೆಯಲ್ಲಿ ಪ್ರತಿಯೊಬ್ಬರೂ ಬ್ಯಾಗ್‌ಗಳಲ್ಲಿ ಬೈಬಲ್‌ ಕೊಂಡೋಗುವುದು ಕಡ್ಡಾಯವಾಗಿದೆ: ನಿಕೃಷ್ಟ ಮಟ್ಟಕ್ಕೆ ಮತ ಪ್ರಚಾರ

ಬೆಂಗಳೂರು: ಬೆಂಗಳೂರಿನ ಶಾಲೆಯೊಂದು ವಿದ್ಯಾರ್ಥಿಗಳು ಶಾಲೆಗೆ ಬೈಬಲ್ ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸಿದೆ. ಬೆಂಗಳೂರಿನ ಕ್ಲಾರೆನ್ಸ್ ಶಾಲೆಯ ಹೊಸ ನಿರ್ದೇಶನವು ಬಲಪಂಥೀಯ ಗುಂಪುಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದೆ.

ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆ. ವಿದ್ಯಾರ್ಥಿಗಳ ಇಚ್ಛೆಗೆ ವಿರುದ್ಧವಾಗಿ ಧಾರ್ಮಿಕ ಶಿಕ್ಷಣವನ್ನು ಹೇರಲಾಗುತ್ತಿದೆ ಎಂದು ಗುಂಪು ಆರೋಪಿಸಿದೆ. ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಲಾಗಿದೆ. ಆದಾಗ್ಯೂ ಪೋಷಕರಿಂದ ವಿರೋಧ ವ್ಯಕ್ತವಾಗಿಲ್ಲ ಎಂದು ಶಾಲಾ ಮಂಡಳಿ ಸಮ್ಜಜಾಯಿಷಿ ಕೊಟ್ಟಿದೆ.

ಇತ್ತೀಚಿಗೆ ಭಾರತದ ಗ್ರಂಥವಾದ ಭಗವದ್ಗೀತೆ ಬೋಧನೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸುವುದಾಗಿ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ ಬಳಿಕ ಈ ವಿಚಾರ ಹೊರ ಬಂದಿದೆ. ಭಗವದ್ಗೀತೆ ಈ ದೇಶದ ಮೂಲದ್ದು. ಅದನ್ನು ಭೋಧಿಸುವುದರಲ್ಲಿ ಒಂದು ಅರ್ಥವಿದೆ. ಆದರೆ ಬೈಬಲ್ ಯಾವ ಗುಪ್ತ ಉದ್ಧೇಶ ಇಟ್ಟುಕೊಂಡು ಹೇರಲಾಗುತ್ತಿದೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments