HomeKarnatakaಕೊಡಗು: ದನದೊಂದಿಗೆ ಅಸಹಜ ಸೆಕ್ಸ್ ನಡೆಸುತ್ತಿದ್ದ ಸಿದ್ದಿಕಿ ಎಂಬ ಕಾಮಿಯ ಬಂಧನ

ಕೊಡಗು: ದನದೊಂದಿಗೆ ಅಸಹಜ ಸೆಕ್ಸ್ ನಡೆಸುತ್ತಿದ್ದ ಸಿದ್ದಿಕಿ ಎಂಬ ಕಾಮಿಯ ಬಂಧನ

ಕೊಡಗು: ದನದ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೊಡಗಿನ ಸುಂಟಿಕೊಪ್ಪದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅಬೂಬಕ್ಕರ್‌ ಸಿದ್ದಿಕಿ(40) ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ಹೊಲದಲ್ಲಿ ಮೇಯುತ್ತಿದ್ದ ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಹಸುವಿನ ಮಾಲೀಕ ದೇವಯ್ಯ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಬುಬಕ್ಕರ್ ಸಿದ್ಧಿಕಿಯನ್ನು ಬಂಧಿಸಿದ್ದಾರೆ.

ಘಟನೆ ವಿವರ: ಸುಂಟಿಕೊಪ್ಪ ಸಂತೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಒಂದು ಕೆಂಪು ಬಣ್ಣದ ಕೆಎ -09-6223 ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್​ ನಿಂತಿದ್ದನ್ನು ಗಮನಿಸಿದ ದೇವಯ್ಯ, ಹೊಲದ ಬಳಿ ಹೋದಾಗ ಅಬೂಬಕ್ಕರ್‌ ಸಿದ್ದಿಕಿ ಹಸುವಿನೊಂದಿಗೆ ಸಂಭೋಗ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಹಸುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments