HomeKarnatakaಇಳಿಮುಖವಾಗುತ್ತಿದೆ ಕೊರೋನಾ: ರಾಜ್ಯದಲ್ಲಿ ಇಂದು 60 ಸಾವು, 16,436 ಹೊಸ ಪಾಸಿಟಿವ್ ಪ್ರಕರಣ

ಇಳಿಮುಖವಾಗುತ್ತಿದೆ ಕೊರೋನಾ: ರಾಜ್ಯದಲ್ಲಿ ಇಂದು 60 ಸಾವು, 16,436 ಹೊಸ ಪಾಸಿಟಿವ್ ಪ್ರಕರಣ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗುವ ಲಕ್ಷಣಗಳು ಕಾಣುತ್ತಿದ್ದು ಕಳೆದ 24 ಗಂಟೆಯಲ್ಲಿ 16,436 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ೬೦ ಮಂದಿ ಕಳೆದ 24 ಗಂಟೆಯಲ್ಲಿ ಕೊರೊನದಿಂದ ಸಾವಿಗೀಡಾಗಿದ್ದಾರೆ ಎಂದು ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,60,774ಕ್ಕೆ ತಲುಪಿದೆ. ಇದುವರೆಗಿನ ಸಾವಿನ ಸಂಖ್ಯೆ 39,197ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 6,640 ಮಂದಿ ಪಾಸಿಟಿವ್ ಆಗಿದ್ದು ಇದರೊಂದಿಗೆ ಬೆಂಗಳೂರಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,43,065ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಬೆಂಗಳೂರಲ್ಲಿ ಕೊರೋನಾದಿಂದ 14 ಮಂದಿ ಮೃತಪಟ್ಟಿದ್ದಾರೆ.

44,819 ಸೋಂಕಿತರು ಇಂದು ರಾಜ್ಯದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 36,72,744ಕ್ಕೆ ಏರಿಕೆಯಾಗಿದೆ. ಪ್ರಸಕ್ತ 1,48,800 ಸಕ್ರೀಯ ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments