HomeKarnatakaಹುಬ್ಬಳ್ಳಿ ಗಲಭೆ: ಮತ್ತೆ 11 ಆರೋಪಿಗಳ ಬಂಧನ, ಪೊಲೀಸ್ ಜೀಪ್ ಮೇಲೆ ನಿಂತು ಭಾಷಣ ಬಿಗಿದ...

ಹುಬ್ಬಳ್ಳಿ ಗಲಭೆ: ಮತ್ತೆ 11 ಆರೋಪಿಗಳ ಬಂಧನ, ಪೊಲೀಸ್ ಜೀಪ್ ಮೇಲೆ ನಿಂತು ಭಾಷಣ ಬಿಗಿದ ಮೌಲ್ವಿಗಾಗಿ ಹುಡುಕಾಟ ತೀವ್ರ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ 11 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದ್ದು ಬಂಧಿತರ ಸಂಖ್ಯೆ 138 ಕ್ಕೆ ತಲುಪಿದೆ. ಬಂಧಿತ ಅಪರಾಧಿಗಳನ್ನು ಕಲಬುರಗಿ ಜೈಲಿಗೆ ರವಾನಿಸಲಾಗಿದೆ.

ಹಿಂಸಾಚಾರ ಪ್ರಕರಣದ ಪ್ರಮುಖ ರೂವಾರಿ ಎಂದೇ ಪರಿಗಣಿಸಲ್ಪಟ್ಟ ಪ್ರಕರಣ ನಡೆದ ದಿನದಿಂದ ತಲೆಮರೆಸಿಕೊಂಡಿರುವ ಮೌಲ್ವಿಗಾಗಿ ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಮೌಲ್ವಿ ಜನರನ್ನು ಒಟ್ಟುಗೂಡಿಸಿದ್ದು ಅಲ್ಲದೆ ಜನರನ್ನು ಪ್ರಚೋದಿಸುವ ಸಲುವಾಗಿ ಪೊಲೀಸ್ ಜೀಪ್ ಮೇಲೆ ನಿಂತು ಭಾಷಣ ಬಿಗಿದಿದ್ದನು.

ಸದ್ಯಕ್ಕೆ ಗಲಭೆ ಪ್ರದೇಶ ಶಾಂತವಾಗಿದ್ದು ಗಲಭೆ ನಡೆದ ಪ್ರದೇಶದಲ್ಲಿ ಹಾಕಲಾಗಿದ್ದ ಕಲಂ 144 ನಿಷೇಧಾಜ್ಞೆಯನ್ನು ಏಪ್ರಿಲ್ 23ರವರೆಗೆ ವಿಸ್ತರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments